ಪೊನ್ನಂಪೇಟೆ, ಜೂ. 20: ಕಾವೇರಿ ಕೊಡವ ಕೂಟದ ವಾರ್ಷಿಕ ಮಹಾಸಭೆ ಕೂಟದ ಅಧ್ಯಕ್ಷ ಪೆಮ್ಮಂಡ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೂಟದ ಸದಸ್ಯರು, ಸಾಹಿತಿಗಳು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ, ಪತ್ನಿ ಅನಿತಾ ಕಾರ್ಯಪ್ಪ ಹಾಗೂ ಮಗ ಪೊನ್ನಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ಕಾವೇರಿ ಕೊಡವ ಕೂಟದಲ್ಲಿ ಒಟ್ಟು 174 ಸದಸ್ಯರುಗಳಿದ್ದು ಇವರ ಪೈಕಿ 22 ಸದಸ್ಯರು ನಿವೃತ್ತ ಶಿಕ್ಷಕರಾಗಿದ್ದು, ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು.

ಕಾವೇರಿ ಕೊಡವ ಕೂಟವು ತನ್ನ ಸದಸ್ಯರ ಅನುಕೂಲಕ್ಕಾಗಿ ಮರಣ ನಿಧಿ ಹಾಗೂ ಶಿಕ್ಷಣ ನಿಧಿ ಸ್ಥಾಪಿಸಿದ್ದು, ನಿವೃತ್ತ ಶಿಕ್ಷಕಿ ಬಲ್ಯಮಂಡ ದೇವಕ್ಕಿ ಅವರು ರೂ. 10 ಸಾವಿರ ವಂತಿಗೆ ನೀಡಿ ಬಡ್ಡಿಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಕಡೇಮಡ ಡಿಕ್ಕಿ ಬೆಳ್ಯಪ್ಪ (ಶೇ. 96) ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಅಣ್ಣಾಳಮಡ ದೇವಯ್ಯ, ಕಾಳಿಮಾಡ ಪೂವಯ್ಯ, ಬಾಚೀರ ಚಿಣ್ಣಪ್ಪ, ತಾಣಚೀರ ವಿಶು ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಕಡೇಮಡ ಕುಸುಮ ಸ್ವಾಗತಿಸಿದರೆ, ಖಜಾಂಚಿ ಚಿಮ್ಮಣಮಡ ವಾಸು ಉತ್ತಪ್ಪ ವಂದಿಸಿದರು.