ಗುಡ್ಡೆಹೊಸೂರು, ಜೂ. 20: ಇಲ್ಲಿನ ರಾಜ್ಯ ಹೆದ್ದಾರಿ ಗುಡ್ಡೆಹೊಸೂರಿನ ವೃತ್ತದ ಬಳಿ ಇತ್ತೀಚೆಗೆ ಹೊಸದಾಗಿ ನಂಜರಾಯಪಟ್ಟಣ ವಿಭಾಗಕ್ಕೆ ಕುಶಾಲನಗರದಿಂದ ಲೈನ್ ಅಳವಡಿಸಲಾಗಿದೆ. ಈ ಕಾಮಗಾರಿ ಮುಗಿದು 1 ತಿಂಗಳು ಕಳೆಯಿತು. ಪ್ರತಿನಿತ್ಯ ಪಕ್ಷಿಗಳು ಈ ತಂತಿಗೆ ಸಿಲುಕಿ ಸಾಯುತ್ತಿವೆ. ಇದಕ್ಕೆ ಮುಖ್ಯ ಕಾರಣ ತಂತಿಯ ಅಂತರ ಬಹಳ ಕಡಿಮೆ.
ಈ ಸಮಸ್ಯೆಯನ್ನು ಸೆಸ್ಕ್ ಅಧಿಕಾರಿಗಳ ಗಮನಕ್ಕೂ ಗ್ರಾಮಸ್ಥರು ತಂದಿದ್ದು ಗುತ್ತಿಗೆ ಪಡೆದ ಗುತ್ತಿಗೆದಾರರಿಂದ ಸರಿಪಡಿಸುವದಾಗಿ ತಿಳಿಸುತ್ತಾರೆ. ಪಕ್ಷಿಗಳು ಸಾಯುವ ಸಂದರ್ಭ ಭಾರೀ ಶಬ್ದ ಕೇಳಿಬರುತ್ತಿದೆ. ಅಕ್ಕಪಕ್ಕದಲ್ಲಿರುವವರು ಭಯಬೀತರಾಗುವದರಿಂದ ಸಂಬಂಧ ಪಟ್ಟವರು ಈ ಸಮಸ್ಯೆ ಪರಿಹರಿಸಲು ಎತ್ತರದ ಕಂಬವನ್ನು ಇಲ್ಲಿಗೆ ಅಳವಡಿಸ ಬೇಕಾಗುತ್ತದೆ. ತಕ್ಷಣದಿಂದಲೆ ಈ ಸಮಸ್ಯೆಯನ್ನು ಸಂಬಂಧಪಟ್ಟವರು ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.