ಮಡಿಕೇರಿ, ಜೂ. 20: ಈ ವರ್ಷ ಮಳೆ ಹೆಚ್ಚಾಗಿದ್ದು ಕೊಡಗಿನ ಎಲ್ಲಾ ರಸ್ತೆಗಳು ಅಲ್ಲಲ್ಲಿ ಹೊಂಡಗಳು, ಗುಂಡಿಗಳು ಬಿದ್ದು ಹಾಳಾಗಿವೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ವಾಹನ ದಟ್ಟಣೆ ಅಧಿಕವಾಗಿವೆ. ಆದ್ದರಿಂದ ಕೊಡಗಿನ ರಸ್ತೆಗಳ &divound;ರ್ವಹಣೆಗೆ ವಾಡಿಕೆಗಿಂತ ಹೆಚ್ಚಿನ ಅನುದಾನವನ್ನು ನೀಡಬೇಕು ಹಾಗೂ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಬೇಕಾಗಿ ಲೋಕೋಪಯೋಗಿ ಸಚಿವರಿಗೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರು ಮನವಿ ಮಾಡಿದ್ದಾರೆ.
ರಸ್ತೆಯ ಎರಡೂ ಬದಿಗಳಲ್ಲಿ ಮಳೆಯ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲದೆ ಇರುವದರಿಂದ ರಸ್ತೆಗಳ ನಿರ್ವಹಣೆಗೆ ಈ ಮೊದಲು ಇದ್ದ ಗ್ಯಾಂಗ್‍ಮ್ಯಾನ್‍ಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲು ಕೋರಿದೆ.
ಕೊಡಗು ಜಿಲ್ಲೆಯ ಕಾಲೋನಿ ಮತ್ತು ಎತ್ತರ ಪ್ರದೇಶ ಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬಿಡುಗಡೆ ಯಾಗುತ್ತಿರುವ ಅನುದಾನದಲ್ಲಿ ಈ ಜನಾಂಗದವರಿಗೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯ ವಾಗುತ್ತಿಲ್ಲ. ಆದ್ದರಿಂದ ಈ ಸಂಬಂಧ ಎಸ್.ಸಿ.ಪಿ ಯೋಜನೆಯಡಿ ರೂ.200 ಲಕ್ಷ ಹಾಗೂ ಟಿ.ಎಸ್.ಪಿ ಯೋಜನೆಯಡಿ ರೂ.200 ಲಕ್ಷದ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅನುದಾನ ಬಿಡುಗಡೆ ಮಾಡಬೇಕಾಗಿ ಜಿ.ಪಂ.ಅಧ್ಯಕ್ಷರು ಲೋಕೋಪಯೋಗಿ ಸಚಿವರಲ್ಲಿ ಕೋರಿದ್ದಾರೆ.
ಹಣ ಬಿಡುಗಡೆಗೆ ಜಿ.ಪಂ. ಉಪಾಧ್ಯಕ್ಷರ ಮನವಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಪುಷ್ಪಗಿರಿ ದೇವಸ್ಥಾನ ಹಾಗೂ ಮಲ್ಲಳ್ಳಿ ಜಲಪಾತಕ್ಕೆ ಕುಂದಳ್ಳಿಯಿಂದ ತೆರಳುವ ಮಾರ್ಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಇದರಿಂದ ಅಲ್ಲಿನ ಸ್ಥಳೀಯ &divound;ವಾಸಿಗಳಿಗೆ ಹಾಗೂ ಪ್ರವಾಸಿಗರಿಗೆ ಸಂಚರಿಸಲು ಕಷ್ಟವಾಗಿದೆ. ಆದ ಕಾರಣ ಲೋಕೋಪಯೋಗಿ ಇಲಾಖೆ ವತಿಯಿಂದ ಈ ರಸ್ತೆಗೆ ರೂ.50 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಿ ಪ್ರವಾಸಿ ತಾಣದ ಅಭಿವೃದ್ಧಿಗೆ ಹಾಗೂ ಸ್ಥಳೀಯ &divound;ವಾಸಿಗಳಿಗೆ ಅನುಕೂಲ ಮಾಡಿ ಕೊಡುವಂತೆ ಲೋಕೋಪಯೋಗಿ ಸಚಿವರಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಕೋರಿದ್ದಾರೆ.