ಮಡಿಕೇರಿ, ಜೂ. 20: ಮಡಿಕೇರಿ ತಾಲೂಕಿನ ಪ್ರೌಢಶಾಲಾ ಶಿಕ್ಷಕರಿಗೆ ವಿಷಯಾಧಾರಿತ ಕಾರ್ಯಾಗಾರ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಮೇಲ್ವಿಚಾರಣೆಯಲ್ಲಿ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಎಫ್‍ಎಂಸಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಡಾ. ಕರುಣಾಕರ, ಡಾ. ಕೆ.ಎಸ್. ನಯನ, ಹೆಚ್.ಜಿ. ಪುಟ್ಟರಂಗನಾಥ, ಕೆ.ಯು. ರಂಜಿತ್, ಎಂ.ಜೆ. ಗಂಗಮ್ಮ, ಪ್ರೊ. ನಾಗರಾಜು, ಡಾ. ಶ್ರೀಧರ ಹೆಗಡೆ, ರೂಪ ಗಣಪತಿ ಪಾವಸ್ಕರ್, ಸಿಸಿಲಿಯಾ ಡಿಸೋಜ, ಕಾವ್ಯ ಹೆಗಡೆ, ಎಂ.ಎಸ್. ಬಾಹುಬಲಿ, ಕೆ.ಸಿ. ತಿಪ್ಪೆಸ್ವಾಮಿ, ಹೆಚ್.ಬಿ. ಬೆಳ್ಯಪ್ಪ, ಕೆ.ಪಿ. ಜಯಕುಮಾರ್ ಅವರು ವಿವಿಧ ವಿಷಯಗಳ ಕುರಿತು ತರಬೇತಿ ನೀಡಿದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.