ಕೂಡಿಗೆ, ಜೂ. 21: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ-ಹೆಬ್ಬಾಲೆ ವಲಯದ ವತಿಯಿಂದ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ ರೂ. 25,000 ಹಣವನ್ನು ತೊರೆನೂರು ಗ್ರಾಮದ ಶ್ರೀ ದಂಡಿನೇಶ್ವರಿ ದೇವಸ್ಥಾನಕ್ಕೆ ಯೋಜನಾಧಿಕಾರಿ ಪ್ರಕಾಶ್ ವೈ ವಿತರಣೆ ಮಾಡಿದರು.
ಯೋಜನೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ದೇವಸ್ಥಾನ ಅಭಿವೃದ್ಧಿ, ಹಾಲಿನ ಡೈರಿ ಕಟ್ಟಡ ರಚನೆ ಇಂತಹ ಹಲವಾರು ಕಾರ್ಯಕ್ರಮಗಳಿಗೆ ಯೋಜನೆಯಿಂದ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭ ಊರಿನ ಮುಖಂಡರು, ದೇವಾಲಯದ ಅರ್ಚಕರು, ದೇವಾಲಯ ಸಮಿತಿಯ ಅಧ್ಯಕ್ಷ ಹನುಮಯ್ಯ, ಕಾರ್ಯದರ್ಶಿ ಶೇಖರ್, ಶಿಕ್ಷಕ ಶಿವಕುಮಾರ್, ವಲಯ ಮೇಲ್ವಿಚಾರಕ ವಿನೋದ್ಕುಮಾರ್, ಸೇವಾ ಪ್ರತಿನಿಧಿ ನಾಗವೇಣಿ ಹಾಗೂ ದೇವಾಲಯ ಸಮಿತಿ ನಿರ್ದೇಶಕರು ಇದ್ದರು.