ಸುಂಟಿಕೊಪ್ಪ, ಜೂ. 21: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಶಿಲಾನ್ಯಾಸ ಪೂಜೆ ನಡೆಸಲಾಯಿತು. ಕೇರಳದ ಬ್ರಹ್ಮ ಶ್ರೀ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದು ದೇವರ ಕಲ್ಲಿನ ಅಡಿಪಾಯವನ್ನು ಹಾಕುವದರೊಂದಿಗೆ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಆದಷ್ಟು ಬೇಗನೇ ದೇವಾಲಯದ ನಿರ್ಮಾಣದ ಕಾರ್ಯವನ್ನು ಆರಂಭಿಸಿ ಸುಂದರವಾದ ದೇವಾಲಯವನ್ನು ನಿರ್ಮಿಸಲಾಗುವದು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೈ.ಯಂ. ಕರುಂಬಯ್ಯ ತಿಳಿಸಿದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಖಜಾಂಚಿ ಎಸ್.ಜಿ. ಶ್ರೀನಿವಾಸ್, ಸಮಿತಿ ಸದಸ್ಯರುಗಳಾದ ದಾಸಂಡ ರಮೇಶ್, ಪಿ.ಕೆ. ಶೇಷಪ್ಪ, ಪಿ.ಕೆ. ಜಗದೀಶ್ ರೈ, ಕೆ.ಪಿ. ಜಗನ್ನಾಥ್, ದಿನ ದೇವಯ್ಯ, ಸದಾಶಿವ ರೈ, ವಿ.ಎ. ಸಂತೋಷ್, ಬೆಳೆಗಾರ ಕೋಟೆರ ಶಂಬು, ದೇವಾಲಯ ಸಮಿತಿಯ ಕಾರ್ಯದರ್ಶಿ ಸುರೇಶ್ ಗೋಪಿ, ಸಹ ಕಾರ್ಯದರ್ಶಿ ಎಂ.ಎಸ್. ಸುನಿಲ್ ಇದ್ದರು.