ಮಡಿಕೇರಿ, ಜೂ. 21: ವಾಣಿಜ್ಯ ಸಚಿವಾಲಯದ ನಿಯಮಗಳನ್ನು ಮೀರಿ ವಿದೇಶದಿಂದ ಕರಿಮೆಣಸು ಆಮದು ವಹಿವಾಟು ಕೈಗೊಳ್ಳುತ್ತಿರುವ ಬೆಂಗಳೂರಿನ ಇಂಡಿಯಾ ಪ್ರಾಡಕ್ಟ್ ಸಂಸ್ಥೆಯ ವಿರುದ್ಧ ಕರಿಮೆಣಸು ಬೆಳೆಗಾರರ ಸಮನ್ವಯ ವೇದಿಕೆ ವತಿಯಿಂದ ಸಾಂಕೇತಿಕ ಪ್ರತಿಭಟನೆ ಕೈಗೊಂಡು ನಿಯಮಬಾಹಿರ ವಹಿವಾಟು ಕೈಗೊಳ್ಳದಂತೆ ಎಚ್ಚರಿಸಲಾಯಿತು.ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಒಟ್ಟುಗೂಡಿದ ದಕ್ಷಿಣ ಭಾರತದ ವಿವಿಧ ಬೆಳೆಗಾರ ಸಂಘಟನೆಗಳಾದ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಬೆಳೆಗಾರರ ಸಂಘ, ಕೊಡಗು ಜಿಲ್ಲಾ ಬೆಳೆಗಾರರ ಸಂಘ, ಬೇಲೂರು ಬೆಳೆಗಾರರ ಸಂಘ, ಮೂಡಿಗೆರೆ ಜಿಲ್ಲಾ ಕಾಫಿ ಬೆಳೆಗಾರರ ಸಂಘ, ಅರೆಹಳ್ಳಿ ಬೆಳೆಗಾರರ ಸಂಘ, ಗೋಣಿಬೀಡು ಬೆಳೆಗಾರರ ಸಂಘ, ಹಾನ್ಬಲ್ ಬೆಳೆಗಾರರ ಸಂಘ, ಬ್ಲಾಕ್ ಗೋಲ್ಡ್ ಲೀಗ್, ಕೊಡಗು ಜಿಲ್ಲಾ ಬೆಳೆಗಾರರ ಸಂಘ, ಮಲೆನಾಡು ಸಂಘ ಸೇರಿದಂತೆ ಕರಿಮೆಣಸು ಬೆಳೆಯುವ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಇದಕ್ಕೂ ಮುನ್ನ 12 ಗಂಟೆಗೆ ಬೆಂಗಳೂರು ಕೊಡವ ಸಮಾಜದಲ್ಲಿ ಸೇರಿದ ಬೆಳೆಗಾರರು ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚಿಸಿದರು. ಪ್ರತಿಭಟನೆಯ ಉದ್ದೇಶದ ಬಗ್ಗೆ ಸಮನ್ವಯ ಸಮಿತಿಯ ಪದಾಧಿಕಾರಿಗಳಾದ ಕೆ.ಕೆ. ವಿಶ್ವನಾಥ್ ಹಾಗೂ ಪ್ರದೀಪ್ ಪೂವಯ್ಯ ಸಭೆಗೆ ವಿವರಣೆ ನೀಡಿದರು. ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ರವಿ ಉತ್ತಪ್ಪ, ಉಪಾಧ್ಯಕ್ಷೆ ಮೀರಾ ಜಲಜ ಕುಮಾರ್, ಕಾರ್ಯದರ್ಶಿ ರವಿ ಸುಬ್ಬಯ್ಯ ಸೇರಿದಂತೆ ಪದಾಧಿಕಾರಿಗಳು ಬೆಳೆಗಾರರ ಹೋರಾಟಕ್ಕೆ ಬೆಂಬಲ ನೀಡಿದರು.
12.30 ಗಂಟೆಗೆ ಅಲ್ಲಿಂದ ಹೊರಟ ಮೌನ ಮೆರವಣಿಗೆ ಕ್ವೀನ್ಸ್ ರಸ್ತೆಯಲ್ಲಿಯ ಇಂಡಿಯಾ ಪ್ರಾಡಕ್ಟ್ ಸಂಸ್ಥೆ ಬಳಿ ಜಮಾವಣೆಗೊಂಡಿತು. ಸುಮಾರು 350 ಮಂದಿ ಬೆಳೆಗಾರರು, ವೈಯಕ್ತಿಕ ಹಾಗೂ ಸಂಘಟನೆಗಳ ಪರವಾಗಿ ಪಾಲ್ಗೊಂಡಿದ್ದರು.
ಸಂಸ್ಥೆಯ ಕಚೇರಿ 6ನೇ ಮಹಡಿಯಲ್ಲಿದ್ದುದರಿಂದ ಎಲ್ಲರೂ ಅಲ್ಲಿಗೆ ತೆರಳಲು ಸಾಧ್ಯವಾಗಲಿಲ್ಲ. ಸುಮಾರು 8 ಮಂದಿ
(ಮೊದಲ ಪುಟದಿಂದ) ಪೊಲೀಸ್ ರಕ್ಷಣೆಯಲ್ಲಿ ಸಂಸ್ಥೆಗೆ ತೆರಳಿ ಅದರ ನಿರ್ದೇಶಕ ಮಿಲನ್ ಷಾ ಅವರೊಂದಿಗೆ ಮಾತನಾಡಿದರು. ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ಪ್ರಮುಖರಾದ ಪ್ರದೀಪ್ ಪೂವಯ್ಯ, ಕೆ.ಕೆ. ವಿಶ್ವನಾಥ್, ಕೈಬುಲೀರ ಹರೀಶ್, ನಂದಾ ಬೆಳ್ಯಪ್ಪ, ಗೋವಿಂದ ಶೆಟ್ಟಿ, ಹರೀಶ್ ಪೂವಯ್ಯ, ಕೇಶವ ಕೆಂಜಿಗೆ, ನಂದಿನೆರವಂಡ ದಿನೇಶ್ ಭಾರತದ ಉತ್ತಮ ದರ್ಜೆಯ ಕರಿಮೆಣಸಿನ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿರುವ ಕರಿಮೆಣಸು ಆಮದಿನ ವಿರುದ್ಧ ವಾಣಿಜ್ಯ ಸಚಿವಾಲಯ ಕೆಲವೊಂದು ನಿಯಮಗಳ ಮೂಲಕ ತಡೆಯೊಡ್ಡಿ ದ್ದರೂ, ತಮ್ಮ ಸಂಸ್ಥೆ ನಿಯಮಗಳನ್ನೂ ಮೀರಿ ವಿದೇಶಗಳಿಂದ ಕರಿಮೆಣಸು ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ಕರಿಮೆಣಸು ಬೆಳೆಗೆ ಸೂಕ್ತ ಬೆಲೆ ದೊರಕದಂತಾಗಿ ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಇಂಥ ಪ್ರವೃತ್ತಿಯನ್ನು ಮುಂದುವರೆಸ ದಂತೆ ಎಚ್ಚರಿಸಿದರು.
ಈ ಸಂದರ್ಭ ಬೆಳೆಗಾರ ಪ್ರಮುಖರು ಕೇಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡುವಲ್ಲಿ ಮಿಲನ್ ಷಾ ವಿಫಲರಾದರು. ತಾವು ಈ ವಿಚಾರವನ್ನು ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿಡುವದಾಗಿ ಮತ್ತು ಬೆಳೆಗಾರರಿಗೆ ಪೂರಕವಾಗಿ ಸ್ಪಂದಿಸುವದಾಗಿ ಬೆಳೆಗಾರರ ನಿಯೋಗಕ್ಕೆ ಅವರು ಈ ಸಂದರ್ಭ ಭರವಸೆ ನೀಡಿದರು. 1 ತಿಂಗಳೊಳಗೆ ಆಡಳಿತ ಮಂಡಳಿ ಸಭೆ ನಡೆಸುವದಾಗಿ ಅವರು ಹೇಳಿದರು, ಪ್ರತಿಭಟನಾ ಕಾರರು 15 ದಿನಗಳ ಕಾಲಾವಕಾಶ ನೀಡಿದರು.
ನಂತರ ಪ್ರತಿಭಟನಾಕಾರರು ಮತ್ತೆ ಕೊಡವ ಸಮಾಜದಲ್ಲಿ ಜಮಾವಣೆ ಗೊಂಡು ಇಂದಿನ ಬೆಳವಣಿಗೆಯನ್ನು ಚರ್ಚಿಸಿದರು. ಇಂದಿನ ಹೋರಾಟ, ಮುಂದಿನ ಹೋರಾಟಕ್ಕೆ ನಾಂದಿ ಹಾಡಿದ್ದು, ತಾಂತ್ರಿಕವಾಗಿ ಕಾನೂನಾ ತ್ಮಕವಾಗಿ ಹೋರಾಡಲು ಸಜ್ಜಾಗಿರು ವಂತೆ ತೀರ್ಮಾನಿ¸ Àಲಾಯಿತು.
ಕರ್ನಾಟಕದ ವಿವಿಧ ಕರಿಮೆಣಸು ಬೆಳೆಗಾರ ಜಿಲ್ಲೆಗಳಿಂದ ಬೆಂಗಳೂರಿಗೆ ತೆರಳಿದ್ದ 350ಕ್ಕೂ ಅಧಿಕ ಬೆಳೆಗಾರರು ಧಿಕ್ಕಾರಗಳ ಬದಲಿಗೆ ಮೌನವಾಗಿ ಕರಿಮೆಣಸು ಆಮದು ದಂಧೆಯ ವಿರುದ್ಧ ತಮ್ಮ ಸಾಂಕೇತಿಕ ಪ್ರತಿಭಟನೆ ಕೈಗೊಂಡಿದ್ದು ಗಮನ ಸೆಳೆಯಿತು. ಮುಂದಿನ ದಿನಗಳಲ್ಲಿ ಇಂಥ ಅನಧಿಕೃತ ದಂಧೆ ಮುಂದುವರೆದದ್ದೇ ಆದಲ್ಲಿ ಮತ್ತೆ ಹೋರಾಟಕ್ಕೆ ಮುಂದಾಗುವ ಮೂಲಕ ಕರಿಮೆಣಸು ಬೆಳೆಗಾರರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಮುಂದಾಗುವದಾಗಿ ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ಸಂಚಾಲಕ ಕೆ.ಕೆ. ವಿಶ್ವನಾಥ್ ಈ ಸಂದರ್ಭ ತಿಳಿಸಿದರು. ಈ ಬಗ್ಗೆ ಕೇಂದ್ರ ಸರಕಾರದ ಜಾರಿ ನಿರ್ದೇಶನಾಲಯ ಹಾಗೂ ಇತರ ಇಲಾಖೆಗಳ ವರಿಷ್ಠರ ಗಮನ ಸೆಳೆದಿರುವದಾಗಿ ಅವರು ತಿಳಿಸಿದ್ದಾರೆ.