ವೀರಾಜಪೇಟೆ: ವೀರಾಜಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಮಾಲ್ದಾರೆಯ ಗುಡ್ಲೂರು ಪ್ರಾಥಮಿಕ ಶಾಲೆಯ ಬಡ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಾಗರಣಾ ವೇದಿಕೆಯ ಪ್ರಮುಖರಾದ ಎಂ.ಬಿ. ಚಂದ್ರನ್, ಜೀವನ್, ಇತರ ಕಾರ್ಯಕರ್ತರು, ಶಾಲಾ ಶಿಕ್ಷಕರು ಹಾಜರಿದ್ದರು.*ಗೋಣಿಕೊಪ್ಪಲು: ಪೆÇನ್ನಂಪೇಟೆ ರಾಮಕೃಷ್ಣ ಶಾರದಾ ದೇವೆ ಸೇವಾಶ್ರಮ ವತಿಯಿಂದ ಇಲ್ಲಿನ ಪ್ರಾಥಮಿಕ ಹಿರಿಯ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ನೆಲಹಾಸುಗಳನ್ನು ವಿತರಿಸಿದರು.
ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪನಂದಾಜೀ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು, ನೆಲಹಾಸುಗಳನ್ನು ನೀಡಿದರು. ಶಾಲೆಯ ಉಪಯೋಗಕ್ಕಾಗಿ ಗಾಡ್ರೇಜ್ಗಳನ್ನು ನೀಡಲಾಯಿತು. ಈ ಸಂದರ್ಭ ಮಾತನಾಡಿದ ಸ್ವಾಮಿ ಬೋಧಸ್ವರೂಪನಂದಾಜೀ, ವಿದ್ಯಾರ್ಥಿಗಳು ಆಟದೊಂದಿಗೆ ಪಠ್ಯ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ವಿದ್ಯೆಯಲ್ಲಿ ಪ್ರಗತಿ ಹೊಂದಬೇಕು. ಶಿಕ್ಷಣದಲ್ಲಿ ಪ್ರಗತಿ ಹೊಂದಿದ್ದರೆ ದೇಶವು ಪ್ರಗತಿ ಹೊಂದಲಿದೆ ಎಂದು ಕಿವಿಮಾತು ಹೇಳಿದರು. ಆಶ್ರಮದ ಕಿರಿಯ ವಟು ಗೀತಾಸಾರಾನಂದಾಜೀ, ಸಿ.ಆರ್.ಪಿ. ತಿರುನೆಲ್ಲಿಮಾಡ ಜೀವನ್, ಮುಖ್ಯ ಶಿಕ್ಷಕಿ ಫಿಲೋಮಿನ ಮತ್ತು ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.ಸೋಮವಾರಪೇಟೆ: ಸಮೀಪದ ಆಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘ ಹಾಗೂ ಶಕ್ತಿ ಯುವಕ ಸಂಘದ ವತಿಯಿಂದ ಚೌಡ್ಲು ಸ.ಹಿ.ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳು ಮತ್ತು ಪರಿಕರಗಳನ್ನು ವಿತರಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷೆ ಪೂರ್ಣಿಮ, ತಾಪಂ ಸದಸ್ಯೆ ತಂಗಮ್ಮ, ಗ್ರಾಪಂ ಸದಸ್ಯ ಧರ್ಮ, ಭಾರತೀಯ ಯುವಕ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಶಕ್ತಿ ಯುವಕ ಸಂಘದ ಉಪಾಧ್ಯಕ್ಷ ನಂದ, ಮುಖ್ಯ ಶಿಕ್ಷಕಿ ಶಶಿಕಲಾ ಸೇರಿದಂತೆ ಸಂಘದ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ನಾಪೆÇೀಕ್ಲು: ಬಲ್ಲಮಾವಟಿ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 38 ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಉಚಿತ ಬ್ಯಾಗ್, ಕೊಡೆ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಪೇರೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ 16, ದೊಡ್ಡಪುಲಿಕೋಟು ಸರಕಾರಿ ಪ್ರಾಥಮಿಕ ಶಾಲೆಯ 8, ನೆಲಜಿ ಸರಕಾರಿ ಪ್ರಾಥಮಿಕ ಶಾಲೆಯ 9, ಬಲ್ಲಮಾವಟಿ ನೇತಾಜಿ ಪ್ರೌಢಶಾಲೆಯ 3 ಹಾಗೂ ಇಬ್ಬರು ಅಂಗವಿಕಲ ವಿದ್ಯಾರ್ಥಿಗಳಿಗೆ ನೀಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಬದ್ದಂಜೆಟ್ಟೀರ ದೇವಿ ದೇವಯ್ಯ, ಚಂಗೇಟಿರ ಕುಮಾರ್, ಪಿಡಿಓ ವೀಣಾಕುಮಾರಿ ಇದ್ದರು.