ವೀರಾಜಪೇಟೆ, ಜೂ. 21 : ವೀರಾಜಪೇಟೆಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಪಟ್ಟಣದ ಅರಸು ನಗರದ ಕೂಲಿ ಕಾರ್ಮಿಕರಾದ ಶಶಿಕಲಾ ಎಂಬವರ ಮನೆ ರಾತ್ರಿ 12 ಗಂಟೆ ಸಮಯದಲ್ಲಿ ಸಂಪೂರ್ಣ ಕುಸಿದು ಬಿದ್ದಿದೆ. ಇದರಿಂದ ಅಂದಾಜು ರೂ. 4 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಮನೆ ಬೀಳುವ ಸಂದರ್ಭದಲ್ಲಿ ಶಶಿಕಲಾ ಅವರು ಸಂಬಂಧಿಕರ ಮದುವೆಗೆ ತೆರಳಿದ್ದ ಕಾರಣ ಪ್ರಾಣಹಾನಿ ತಪ್ಪಿದೆ.
ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೇಮಕುಮಾರ್, ನಾಮಕರಣ ಸದಸ್ಯ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕುಸಿದಿರುವ ಬಗ್ಗೆ ತಹಶೀಲ್ದಾರ್‍ಗೆ ದೂರು ನೀಡಿದ ಮೇರೆ ಕಂದಾಯ ಅಧಿಕಾರಿ ಪಳಂಗಪ್ಪ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟ ಪರಿಹಾರದ ಬಗ್ಗೆ ವರದಿ ನೀಡಿದ್ದಾರೆ.
ನಿನ್ನೆ ದಿನ ಬೆಳಗ್ಗಿನಿಂದ ಇಂದು ಬೆಳಗ್ಗಿನ ತನಕ ವೀರಾಜಪೇಟೆ ವಿಭಾಗಕ್ಕೆ ಒಟ್ಟು 1.56 ಇಂಚು ಮಳೆ ಸುರಿದಿದೆ.