ಮಡಿಕೇರಿ, ಜೂ. 21: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ದೇಚೂರು ಶ್ರೀ ರಾಮ ಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಅರ್ಥಪೂರ್ಣ ಹಾಗೂ ಜನಮೆಚ್ಚುವ ರೀತಿಯಲ್ಲಿ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಮಂಟಪ ಸಮಿತಿ ಅಧ್ಯಕ್ಷ ಹೆಚ್.ಪಿ. ತೀರ್ಥಾನಂದ ಹಾಗೂ ಕಾರ್ಯದರ್ಶಿ ಮೋಹನ್ ಕುಮಾರ್ ತಿಳಿಸಿದ್ದಾರೆ.ಪತ್ರಿಕಾ ಭವನದಲ್ಲಿ ಕರೆಯ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರುಗಳು ಈ ಕುರಿತು ಮಾಹಿತಿ ನೀಡಿದರು. ಶತಮಾನೋತ್ಸವದ ಹಿನ್ನೆಲೆ ಈ ಬಾರಿ ಮಂಟಪದಲ್ಲಿ ಅಳವಡಿಸಲು ಸಾರ್ವಜನಿಕರಿಂದ ಕಥಾಸಾರಾಂಶವನ್ನು ಆಹ್ವಾನಿಸ ಲಾಗುತ್ತಿದೆ. ಆಸಕ್ತರು 20 ನಿಮಿಷಗಳಿಗೆ ಸೀಮಿತವಾಗಿ ಪ್ರದರ್ಶಿಸಬಹುದಾದ ಕಥಾ ಸಾರಾಂಶವನ್ನು ಕಳುಹಿಸಿಕೊಡ ಬಹುದು. ಕಥೆಯನ್ನು ಪುರಾಣದ ಯಾವ ಅಧ್ಯಾಯದಿಂದ ಆರಿಸಲಾಗಿದೆ ಎಂಬದನ್ನು ಕೂಡ ಉಲ್ಲೇಖಿಸಿರ ಬೇಕು. ಸಾರ್ವಜನಿಕ ರಿಂದ ಬರುವ ಕಥಾ ಸಾರಾಂಶಗಳ ಪೈಕಿ ಉತ್ತಮವಾದುದನ್ನು ಆಯ್ಕೆ ಮಾಡಿ ಈ ಬಾರಿ ದೇಚೂರು ಮಂಟಪದಲ್ಲಿ ಅಳವಡಿಸ ಲಾಗುವದಲ್ಲದೇ ಆಯ್ಕೆ ಆಗುವ ಕಥಾ ಸಾರಾಂಶ ಕಳುಹಿಸಿ ಕೊಡುವವರಿಗೆ ಆಕರ್ಷಕ ಉಡುಗೊರೆಯನ್ನು ಸಮಿತಿಯಿಂದ ನೀಡಲಾಗುತ್ತದೆ.
(ಮೊದಲ ಪುಟದಿಂದ) ಕಥೆಗಳನ್ನು ತೀರ್ಥಾನಂದ, ಅಧ್ಯಕ್ಷರು, ದೇಚೂರು ದಸರಾ ಮಂಟಪ ಸಮಿತಿ, ದೇಚೂರು ಈ ವಿಳಾಸಕ್ಕೆ ಜುಲೈ 5 ರೊಳಗಾಗಿ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ 9632482165 ದೂರವಾಣಿಯನ್ನು ಸಂಪರ್ಕಿಸಬಹುದು ಎಂದರು.
ಶತಮಾನೋತ್ಸವದ ಅಂಗವಾಗಿ ದೇವಾಲಯದ ಬಳಿ 3 ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಶತಮಾನೋತ್ಸವದ ನೆನಪಿಗಾಗಿ ಸ್ಮರಣ ಸಂಚಿಕೆಯೊಂದನ್ನು ಕೂಡ ಹೊರತರಲು ತೀರ್ಮಾನಿಸಲಾಗಿದೆ. ಪ್ರತಿ ಬಾರಿ ಇಕ್ಕಟ್ಟಿನ ರಸ್ತೆಯಿಂದಾಗಿ ದೇಚೂರು ಮಂಟಪವನ್ನು ದೇವಾಲಯದಿಂದ ಮುಖ್ಯ ರಸ್ತೆಗೆ ತರುವಷ್ಟರಲ್ಲಿ ಬಹಳಷ್ಟು ತೊಂದರೆಗಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೂಲ ವಿಗ್ರಹ ಇರುವ ಮಂಟಪವನ್ನು ದೇವಾಲಯದ ಬಳಿಯಿಂದ ಹೊರಡಿಸಿ, ಕಲಾಕೃತಿಗಳು ಇರುವ ಮಂಟಪವನ್ನು ಆಂಜನೇಯ ದೇವಾಲಯದ ಬಳಿಯಿಂದ ಹೊರಡಿಸಲು ನಿರ್ಧರಿಸಲಾಗಿದೆ. ಶತಮಾನೋತ್ಸವದ ಯಶಸ್ಸಿಗೆ ಸಾರ್ವಜನಿಕರು ಸಕಲ ರೀತಿಯಲ್ಲಿ ಸಹಕಾರ ನೀಡಬೇಕೆಂದು ತೀರ್ಥಾನಂದ ಹಾಗೂ ಮೋಹನ್ ಕುಮಾರ್ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಆನಂದ್, ವಿಜಯಕುಮಾರ್, ಖಜಾಂಚಿ ವಾಸುದೇವ್, ರವಿಸಿಂಗ್ ಉಪಸ್ಥಿತರಿದ್ದರು.