ಗೋಣಿಕೊಪ್ಪಲು, ಜೂ. 21: ಶಕ್ತಿ ವರದಿಗೆ ತುರ್ತು ಸ್ಪಂದನ ಸಿಕ್ಕಿದೆ. ಬಾಳೆಲೆ ಕೊಟ್ಟಗೇರಿ ಮಾರ್ಗ ಕುಸಿದ ದೋಣಿಕಡವು ಸಂಪರ್ಕ ರಸ್ತೆ ತಾತ್ಕಾಲಿಕ ಕಾಮಗಾರಿ ಪೂರ್ಣವಾಗಿದೆ. ಈ ಗ್ರಾಮದ ಗ್ರಾಮಸ್ಥರಿಂದ ಶಕ್ತಿ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ವರದಿ ಪ್ರಕಟಗೊಂಡ ಮರುದಿನವೇ ಪೊನ್ನಂಪೇಟೆ ಜಿ.ಪಂ. ಇಂಜಿನಿಯರಿಂಗ್ ವಿಭಾಗದಿಂದ ಕಾಮಗಾರಿ ಕೈಗೊಳ್ಳಲಾಗಿದೆ.