ಗೋಣಿಕೊಪ್ಪ ವರದಿ, ಜೂ. 23 : ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಒಲಿಂಪಿಕ್ ಡೇ ಆಚರಣೆಯನ್ನು ಹಾಕಿ ಪ್ರದರ್ಶನ ಪಂದ್ಯಾವಳಿ ಮೂಲಕ ಆಚರಿಸಲಾಯಿತು.

ಮಡಿಕೇರಿ ವಸತಿ ಶಾಲೆ ಹಾಗೂ ಕೂಡಿಗೆ ವಸತಿ ಶಾಲೆ ತಂಡಗಳ ನಡುವಿನ ಪಂದ್ಯ 1-1 ಗೋಲುಗಳ ಮೂಲಕ ಡ್ರಾದಲ್ಲಿ ಅಂತ್ಯವಾಯಿತು. ಮಡಿಕೇರಿ ಪರ ರಮ್ಯ, ಕೂಡಿಗೆ ಪರ ಮಧುಮತಿ ತಲಾ ಒಂದೊಂದು ಗೋಲು ಹೊಡೆದರು.

ಪೊನ್ನಂಪೇಟೆ ಹಾಗೂ ಕೂಡಿಗೆ ವಸತಿ ಶಾಲೆಗಳ ನಡುವಿನ ಪಂದ್ಯ ಯಾವುದೇ ಗೋಲು ದಾಖಲಿಸದೆ ಡ್ರಾದಲ್ಲಿ ಅಂತ್ಯವಾಯಿತು.

ಮೂರನೇ ಪಂದ್ಯದಲ್ಲಿ ಮಡಿಕೇರಿ ವಸತಿ ಶಾಲೆ ತಂಡ ಪೊನ್ನಂಪೇಟೆ ವಸತಿ ಶಾಲೆ ವಿರುದ್ದ 3-0 ಗೋಲುಗಳ ಅಂತರದಲ್ಲಿ ಜಯ ಪಡೆಯಿತು. ಮಡಿಕೇರಿ ಪರ ರಮ್ಯ 1, ಶಿಲ್ಪ 2 ಗೋಲು ಹೊಡೆದರು.

ಕೂಡಿಗೆ ವಸತಿ ಶಾಲೆ ಬಿ. ತಂಡವು ಪೊನ್ನಂಪೇಟೆ ಸಿ. ವಿರುದ್ದ 1-0 ಗೋಲುಗಳಿಂದ ಜಯ ಪಡೆಯಿತು. ಕೂಡಿಗೆ ಪರ ದ್ರುವ 1 ಗೋಲು ಹೊಡೆದರು.

ಪೊನ್ನಂಪೇಟೆ ಬಿ. ತಂಡವು ಪೊನ್ನಂಪೇಟೆ ಎ. ವಿರುದ್ದ 1-0 ಗೋಲುಗಳಿಂದ ಜಯ ಪಡೆಯಿತು. ನಿಶಿಕ್ 1 ಗೋಲು ಹೊಡೆದರು. ಪೊನ್ನಂಪೇಟೆ ಬಿ. ತಂಡವು ಕೂಡಿಗೆ ಎ. ವಿರುದ್ದ 1-0 ಗೋಲುಗಳಿಂದ ಜಯಿಸಿತು. ದ್ರುವಿನ್ 1 ಗೋಲು ಬಾರಿಸಿದರು.

ತೀರ್ಪುಗಾರರುಗಳಾಗಿ ಕರವಂಡ ಅಪ್ಪಣ್ಣ, ಕೋಡಿಮಣಿಯಂಡ ಗಣಪತಿ, ಕುಪ್ಪಂಡ ದಿಲನ್, ಹರಿಣಾಕ್ಷಿ ಕಾರ್ಯನಿರ್ವಹಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಸಿ. ಕೆ. ಬೋಪಣ್ಣ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕ್ರೀಡಾಪಟುಗಳಿಗೆ ಮೆಡಲ್ ವಿತರಣೆ ಮಾಡುವ ಮೂಲಕ ಗೌರವ ನೀಡಲಾಯಿತು.

ಮೆಡಲ್ ವಿತರಣೆ ಸಂದರ್ಭ ಹಾಕಿಕೂರ್ಗ್ ಉಪಾಧ್ಯಕ್ಷರುಗಳಾದ ಕಳ್ಳಿಚಂಡ ಪ್ರಸಾದ್, ಮೇಕೇರಿರ ಪೆಮ್ಮಯ್ಯ, ಕಾರ್ಯದರ್ಶಿ ಪಳಂಗಂಡ ಲವಕುಮಾರ್, ಖಜಾಂಜಿ ಲಾಲಾ ಅಯ್ಯಣ್ಣ, ಪಂದ್ಯಾವಳಿ ಸಮಿತಿ ಅಧ್ಯಕ್ಷ ಬುಟ್ಟಿಯಂಡ ಚೆಂಗಪ್ಪ, ತಾಂತ್ರಿಕ ಸಮಿತಿ ಮುಖ್ಯಸ್ಥ ತೀತೀರ ಸೋಮಣ್ಣ, ಸದಸ್ಯ ಕೊಕ್ಕಂಡ ರೋಶನ್, ಮಡಿಕೇರಿ ನಗರ ಸಭೆ ಸದಸ್ಯ ಪಿ. ಡಿ. ಪೊನ್ನಪ್ಪ ಪಾಲ್ಗೊಂಡಿದ್ದರು.