ಮಡಿಕೇರಿ, ಜೂ. 22: ಪದವಿಪೂರ್ವ ಶಿಕ್ಷಣ ಇಲಾಖೆಯು ಬಹುದಿನಗಳಿಂದ ಖಾಲಿಯಾಗಿದ್ದ ಸರಕಾರಿ ಪದವಿಪೂರ್ವ ಕಾಲೇಜುಗಳ ಖಾಯಂ ಪ್ರಾಚಾರ್ಯರುಗಳನ್ನು ನೇಮಕಗೊಳಿಸಿದೆ. ತಾ. 19 ರಂದು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನಡೆದ ಕೌನ್ಸಿಲಿಂಗ್‍ನಲ್ಲಿ ವೀರಾಜಪೇಟೆ ಸರಕಾರಿ ಪದವಿಪೂರ್ವ ಕಾಲೇಜಿಗೆ ಎನ್.ಕೆ. ಜ್ಯೋತಿ, ಮಡಿಕೇರಿ ಸರಕಾರಿ ಪದವಿಪೂರ್ವ ಕಾಲೇಜಿಗೆ ಪಿ.ಆರ್. ವಿಜಯ್ ಹಾಗೂ ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿಗೆ ಪಿ.ಎಸ್. ಜಾನ್ ಅವರನ್ನು ಪ್ರಾಚಾರ್ಯರಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.