ಆಲೂರುಸಿದ್ಧಾಪುರ, ಜೂ. 22: ಮೊಬೈಲ್ ಆಸೆ ತೋರಿಸಿ ತರಕಾರಿ ಕತ್ತರಿಸುವ ಯಂತ್ರ ನೀಡಿದ ಘಟನೆ ಶನಿವಾರಸಂತೆ ಸಮೀಪದ ಒಡೆಯನಪುರದಲ್ಲಿ ನಡೆದಿದೆ.
ಸ್ಯಾಮ್‍ಸಂಗ್ ಗೆಲಾಕ್ಸಿ ಕಂಪನಿ ಯಿಂದ ತಮಿಳುನಾಡುವಿನಿಂದ ಮಾತಾನಾಡುತ್ತಿರುವದು; ನಿಮಗೆ ನಮ್ಮ ಕಂಪನಿಯ ಸುಮಾರು 12 ಸಾವಿರ ಬೆಲೆ ಬಾಳುವ ಮೊಬೈಲ್ ಬಂದಿದೆ; ನೀವು ನಿಮ್ಮ ವಿಳಾಸ ನೀಡಿದರೆ ನಾವು ಎರಡು ದಿನದಲ್ಲಿ ಮೊಬೈಲ್ ಕಳುಹಿಸಿಕೊಡುತ್ತೇವೆ ಎಂದು ಜುಲೈದ್ ಎಂಬವರಿಗೆ ಕನ್ನಡ ಭಾಷೆಯಲ್ಲೇ ಹೇಳಿದ್ದಾರೆ. ಅದರಂತೆ ಸಂಪೂರ್ಣ ವಿಳಾಸವನ್ನು ನೀಡಿದ್ದಾರೆ.
ವಿಳಾಸ ನೀಡಿ ಎರಡೇ ದಿನಕ್ಕೆ ಅಂಚೆ ಕಚೇರಿ ಮೂಲಕ ಒಂದು ದೊಡ್ಡ ಬಾಕ್ಸ್ ಗೊಪಾಲಪುರದ ಜುಲೈದ್ ವಿಳಾಸಕ್ಕೆ ಬಂದಿದೆ. ಅದನ್ನು ತೆÀರೆದು ನೋಡಿ ನಂತರ ಬಿಡಿಸಿಕೊಳ್ಳುತ್ತೇನೆ ಎಂದಾಗ ಅಂಚೆ ಇಲಾಖೆಯಲ್ಲಿ ಆ ಸೌಲಭ್ಯವಿಲ್ಲ ಹಣ ಪಾವತಿಸಿ ಇದನ್ನು ಬಿಡಿಸಿಕೊಳ್ಳಬೇಕು ಎಂದಿದ್ದಾರೆ. ಅದರಂತೆ ರೂ. 1499 ನೀಡಿ ಬಿಡಿಸಿಕೊಂಡು ನೋಡಿದಾಗ ಅದರಲ್ಲಿ ಇದ್ದದ್ದು ಶನಿವಾರಸಂತೆ ಸುತ್ತಮುತ್ತಲಿನ ಅಂಗಡಿಗಳಲ್ಲಿ ದೊರೆಯುವಂತಹ ಕೇವಲ ರೂ. 250 ರಿಂದ 300 ಬೆಲೆ ಬಾಳುವ ತರಕಾರಿ ಕತ್ತರಿಸುವ ಸಾಧನ. ಇದರಿಂದ ಕಂಗಾಲಾದ ಜುಲೈದ್ ಇದೀಗ ಮೊದಲು ಕರೆ ಮಾಡಿದ ದೂರವಾಣಿ ಸಂಖ್ಯೆ 7538868806ಗೆ ಕರೆ ಮಾಡಿದಾಗ ಆ ಸಂಖ್ಯೆ ಚಾಲ್ತಿಯಲ್ಲಿ ಇಲ್ಲ ಎಂದು ಬರುತ್ತಿದೆ. ಯಾರಿಗೆ ದೂರು ನೀಡಬೇಕು ಎಂದು ತೋಚದೆ. ಮುಂದೆ ಯಾರೂ ಈ ರೀತಿ ಮೋಸವಾಗಬಾರದು ಎಂದು ಪತ್ರಿಕೆ ಮೂಲಕ ಮನವಿ ಮಾಡಿ ಕೊಂಡಿದ್ದಾರೆ. ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಎಂಬವದಕ್ಕೆ ತಾಜಾ ಉದಾಹರಣೆ.