ಮಡಿಕೇರಿ, ಜೂ. 22: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ 2018-19ನೇ ಸಾಲಿನ 1ನೇ ಹಂತದ ವಾರ್ಡ್ ಮತ್ತು ಗ್ರಾಮ ಸಭೆಯನ್ನು ಏರ್ಪಡಿಸಲಾಗಿದೆ.

ತಾ. 24 ರಂದು ಕರಡಿಗೋಡು ವಾರ್ಡ್ 1 ರ ವಾರ್ಡ್ ಸಭೆ ಬೆಳಿಗ್ಗೆ 11 ಗಂಟೆಗೆ ಅವರೆಗುಂದ ಗ್ರಾಮದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ. ಗುಹ್ಯ ವಾರ್ಡ್ 1 ರ ವಾರ್ಡ್ ಸಭೆ ಮಧ್ಯಾಹ್ನ 3 ಗಂಟೆಗೆ ಗುಹ್ಯ ಕೂಡುಗದ್ದೆ ಅಂಗನವಾಡಿ ಕೇಂದ್ರದಲ್ಲಿ. ಗುಹ್ಯ ವಾರ್ಡ್ 2 ರ ವಾರ್ಡ್ ಸಭೆ ಸಂಜೆ 4 ಗಂಟೆಗೆ ಗುಹ್ಯ ಕೂಡುಗದ್ದೆ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. ತಾ. 25 ರಂದು ಕರಡಿಗೋಡು ವಾರ್ಡ್ 3 ರ ವಾರ್ಡ್ ಸಭೆ ಬೆಳಿಗ್ಗೆ 11 ಗಂಟೆಗೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಕರಡಿಗೋಡು ವಾರ್ಡ್ 4 ರ ವಾರ್ಡ್ ಸಭೆ ಮಧ್ಯಾಹ್ನ 12 ಗಂಟೆಗೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ. ಕರಡಿಗೋಡು ವಾರ್ಡ್ 2 ವಾರ್ಡ್ ಸಭೆ ಸಂಜೆ 4 ಗಂಟೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದೆ. ತಾ. 26 ರಂದು ಸಿದ್ದಾಪುರ ವಾರ್ಡ್ 1 ರ ವಾರ್ಡ್ ಸಭೆ ಬೆಳಿಗ್ಗೆ 10.30 ಗಂಟೆಗೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ತಾ. 30 ರಂದು ಸೆಂಟನರಿ ಚರ್ಚ್ ಹಾಲ್ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಸೆಂಟನರಿ ಚರ್ಚ್ ಹಾಲ್ ಸಭಾಂಗಣ ವೀರಾಜಪೇಟೆ ರಸ್ತೆ ಸಿದ್ದಾಪುರದಲ್ಲಿ ಸಭೆ ನಡೆಯಲಿದೆ.