ಗೋಣಿಕೊಪ್ಪಲು, ಜೂ. 22: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವೀರಾಜಪೇಟೆಯ ಶನೀಶ್ವರ ಭಕ್ತ ಮಂಡಳಿಯ ಸಹಯೋಗದೊಂದಿಗೆ ಸಂತ ಅನ್ನಮ್ಮ ಕಾಲೇಜಿನ ಆಟದ ಮೈದಾನದಲ್ಲಿ ಹೊಂಗೆಯ ಸಸಿಗಳನ್ನು ನೆಡುವ ಮೂಲಕ ಪರಿಸರ ಕಾಳಜಿ ತೋರಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಾಗೂ ಸಂತ ಅನ್ನಮ್ಮ ಕಾಲೇಜಿನ ರೆವರೆಂಡ್ ಫಾದರ್ ಮದಲೈ ಮುತ್ತು ಅವರುಗಳು ಹೊಂಗೆ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಶನೀಶ್ವರ ಭಕ್ತ ಮಂಡಳಿಯು ಸುಮಾರು 18 ವರ್ಷಗಳಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ಸಾವಿರಾರು ಸಸಿಗಳನ್ನು ನೆಡುತ್ತಾ ಬಂದಿದೆ. ಶಾಲಾ,ಕಾಲೇಜಿನ ವಿದ್ಯಾರ್ಥಿಗಳು ಇಂತಹ ಕೆಲಸದಲ್ಲಿ ಕೈಜೋಡಿಸಬೇಕೆಂದರು.

ರೆವರೆಂಡ್ ಫಾದರ್ ಮದಲೈ ಮುತ್ತು ಅವರು, ಮಾತನಾಡಿ ಸಂಘ, ಸಂಸ್ಥೆಯವರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವದರಿಂದ ಪ್ರಕೃತಿಯನ್ನು ಉಳಿಸಲು ಕಾರಣವಾಗಿದೆ ಎಂದರು. ಶನೀಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಯುವರಾಜ ಕೃಷ್ಣ, ಉಪನ್ಯಾಸಕರುಗಳಾದ, ಶಾಂತೀ ಭೂಷಣ್, ಹೇಮಂತ್, ಎನ್.ಎಸ್.ಎಸ್ ಅಧಿಕಾರಿ, ಜೀವನಜ್ಯೋತಿ ಟ್ರಸ್ಟಿನ ಅಜಯ್ ರಾವ್, ಸೋಮಪ್ಪ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.