ಸುಂಟಿಕೊಪ್ಪ, ಜೂ. 22: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಹಾಗೂ ವಾರ್ಷಿಕ ಶುಲ್ಕವನ್ನು 1986-87ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ನೀಡಲಾಯಿತು.

1986-87ನೇ ಸಾಲಿನ 7ನೇತರಗತಿ ವಿದ್ಯಾರ್ಥಿಗಳು ಸಂತ ಅಂತೋಣಿ ಶಾಲೆಗೆ ತೆರಳಿ ಅಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕ ಶುಲ್ಕ ಹಾಗೂ ಸಮವಸ್ತ್ರಗಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸಿಸ್ಟರ್ ವೀರಾ, ಸಂತಕ್ಲಾರ ಕಾನ್ವೆಂಟಿನ ಸೂಪೀರಿಯರ್ ಸಿಟ್ಟರ್ ವೈಲೆಟ್ ಸಹಶಿಕ್ಷಕರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಮುಂದಿನ ದಿನಗಳಲ್ಲಿಯೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯಹಸ್ತವನ್ನು ನೀಡುವ ಇರಾದೆ ಇರುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭ 1986-87ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳಾಗಿದ್ದ ರಫೀಕ್, ಪಿ.ಆರ್. ಸುಕುಮಾರ್, ಸುರೇಶ್ ಗೋಪಿ, ತೋಮಸ್, ಸುಧೀಶ್ ಕುಮಾರ್, ಫೆಲಿಕ್ಸ್ ಡಿಸೋಜ ಹಾಗೂ ಜ್ಯೋತಿ ಇದ್ದರು.