ಬೆಂಗಳೂರು, ಜೂ. 22: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಲು ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ. ಕೊಡಗು ಜಿಲ್ಲೆಗೆ ಬೃಹತ್ ಕೈಗಾರಿಕೆ ಸಚಿವ ಕೆ.ಜೆ. ಜಾರ್ಜ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸುವ ಸಾಧ್ಯತೆ ಇರುವದಾಗಿ ಬಲ್ಲಮೂಲಗಳಿಂದ ತಿಳಿದುಬಂದಿದೆ. ಜಾರ್ಜ್ ಅವರು ಈ ಹಿಂದೊಮ್ಮೆ ಉಸ್ತುವಾರಿ ಸಚಿವರಾಗಿದ್ದು, ಕೊಡಗಿನ ಸಂಬಂಧ ಇರುವದರಿಂದಾಗಿ ಈ ಹೊಣೆಗಾರಿಕೆ ನೀಡಲಿರುವದಾಗಿ ತಿಳಿದುಬಂದಿದೆ.