ಮಡಿಕೇರಿ, ಜೂ. 22: ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಡಿಯಲ್ಲಿ ಸೇರಿಸುವ ಸಲುವಾಗಿ ಹಿಂದಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌಖಿಕ ಆದೇಶದ ಮೂಲಕ ತಡೆ ಮಾಡಲ್ಪಟ್ಟಿದ್ದ ಕೊಡವರ ಸಮಗ್ರ ಕುಲಶಾಸ್ತ್ರ (ಎಥ್ನೋಗ್ರಾಫಿಕ್) ಅಧ್ಯಯನವನ್ನು ಸಮರೋಪಾದಿಯಲ್ಲಿ ಮಡಿಕೇರಿ, ಜೂ. 22: ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಡಿಯಲ್ಲಿ ಸೇರಿಸುವ ಸಲುವಾಗಿ ಹಿಂದಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌಖಿಕ ಆದೇಶದ ಮೂಲಕ ತಡೆ ಮಾಡಲ್ಪಟ್ಟಿದ್ದ ಕೊಡವರ ಸಮಗ್ರ ಕುಲಶಾಸ್ತ್ರ (ಎಥ್ನೋಗ್ರಾಫಿಕ್) ಅಧ್ಯಯನವನ್ನು ಸಮರೋಪಾದಿಯಲ್ಲಿ ಕೇಂದ್ರ ಸರಕಾರಕ್ಕೆ ತುರ್ತಾಗಿ ಕಳುಹಿಸಬೇಕು. ಅಥವಾ ಕುಲಶಾಸ್ತ್ರ ಅಧ್ಯಯನ ನಡೆಸದೇ ನೇರವಾಗಿ ತಮ್ಮ ವಿವೇಚನಾ ಅಧಿಕಾರವನ್ನು ಬಳಸಿ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನ ಶೆಡ್ಯೂಲ್ ಪಟ್ಟಿಗೆ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಆ ಮೂಲಕ ತಮಗಿರುವ ಕೊಡವ ಪ್ರೇಮ ಮತ್ತು ಕಾಳಜಿಯ ಬದ್ಧತೆಯನ್ನು ಒರೆಗಲ್ಲಿಗೆ ಹಚ್ಚುವಂತಾಗಬೇಕು ಎಂದು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತದ ಮೂಲಕ ಸಲ್ಲಿಸಲಾಯಿತು.
ಸಿ.ಎನ್.ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕಲಿಯಂಡ ಪ್ರಕಾಶ್, ಮೂಕೊಂಡ ದಿಲೀಪ್, ಬಾಚಮಂಡ ಬೆಲ್ಲು ಪೂವಪ್ಪ, ಕಲಿಯಂಡ ಮೀನಾ, ಅಪ್ಪಚ್ಚಿರ ರೀನಾ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಪ್ಪಾರಂಡ ಪ್ರಸಾದ್, ನಂದಿನೆರವಂಡ ವಿಜು, ಜಮ್ಮಡ ಮೋಹನ್, ಮದ್ರಿರ ಕರುಂಬಯ್ಯ, ಕಾಂಡೆರ ಸುರೇಶ್, ಬಲ್ಲಚಂಡ ರಾಮಕೃಷ್ಣ, ಬಲ್ಲಚಂಡ ಟಿಟ್ಟು, ಕಾಟುಮಣಿಯಂಡ ಉಮೇಶ್, ಚೆಂಬಂಡ ಜನತ್ಕುಮಾರ್, ಕಿರಿಯಮಾಡ ಶರಿನ್, ಅಪ್ಪೆಯಂಗಡ ಮಾಲೆ, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಚೇಂದಂಡ ಲಾಲ ಪೊನ್ನಪ್ಪ, ಮಣವಟ್ಟಿರ ಸ್ವರೂಪ್, ಮಣವಟ್ಟಿರ ನಂದ, ಪುಲ್ಲೇರ ಕಾಳಪ್ಪ, ಪುಲ್ಲೇರ ಸ್ವಾತಿ ಕಾಳಪ್ಪ, ಅಜ್ಜೇಟಿರ ಶಂಭು, ಅಜ್ಜೇಟಿರ ರಾಣಿ, ಮಂದಪಂಡ ಮನೋಜ್ ಮತ್ತು ಮಂದಪಂಡ ಸೂರಜ್ ಗಣಪತಿ ಧರಣಿಯಲ್ಲಿ ಭಾಗವಹಿಸಿದ್ದರು.