ಕೂಡಿಗೆ, ಜೂ. 23 : ಮನೆಯ ಮುಂದೆ ನಿಲ್ಲಿಸಿದ್ದ ತೊರೆನೂರು ಗ್ರಾಮದ ಕೆ.ಎಸ್.ಕೃಷ್ಣೇಗೌಡ ಎಂಬವರ ಟಿಪ್ಪರ್ ವಾಹನದ 2 ಡಿಸ್ಕ್ ಹಾಗೂ ಟಯರ್‍ಗಳು ಕಳುವಾಗಿದೆ. ಟಿಪ್ಪರ್‍ನ ಮಾಲೀಕ ಕೆ.ಎಸ್. ಕೃಷ್ಣೇಗೌಡ ಅವರು ಟಯರ್ ಕಳ್ಳತನವಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವ್ಯಾಪ್ತಿಯಲ್ಲಿ ಆಗ್ಗಾಗ್ಗೆ ಕಳ್ಳತನವಾಗುತ್ತಿರುವದರಿಂದ ಈ ಬಗ್ಗೆ ಪೊಲೀಸರು ಹೆಚ್ಚು ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.