ಮಡಿಕೇರಿ, ಜೂ. 22: ನವದೆಹಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ವತಿಯಿಂದ ರಾಜ್ಯದಲ್ಲಿನ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯವೆಸಗಿದ ಬಗ್ಗೆ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯಕ್ಕೊಳಗಾದ ಬಗ್ಗೆ ದೂರುಗಳ ಕುರಿತು ಜುಲೈ 26 ಮತ್ತು 27 ರಂದು ಬೆಂಗಳೂರಿನಲ್ಲಿ ಕುಂದುಕೊರತೆ ನಿವಾರಣೆ ಸಭೆ ನಡೆಯಲಿದೆ.
ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳು ತಮ್ಮ ದೂರುಗಳನ್ನು ಸಲ್ಲಿಸಲು ತಾ. 30 ರವರೆಗೆ ಅವಕಾಶ ನೀಡಿದೆ. ದೂರನ್ನು ರಿಜಿಸ್ಟ್ರಾರ್, ರಾಷ್ಟ್ರೀಯ ಮಾನವ ಹಕ್ಕು ಆಯೋಗ, ಮಾನವ ಅಧಿಕಾರ ಭವನ, ಸಿ-ಬ್ಲಾಕ್, ಜಿಪಿಒ ಕಾಂಪ್ಲೆಕ್ಸ್, ಐಎನ್ಎ, ನವದೆಹಲಿ ಇಲ್ಲಿಗೆ ಪತ್ರದ ಮೂಲಕ ಅಥವಾ ಇ-ಮೇಲ್ ರಿಡಿಟಚಿತಿಟಿhಡಿಛಿ@ಟಿiಛಿ.iಟಿ ಅಥವಾ ಫ್ಯಾಕ್ಸ್ ಸಂಖ್ಯೆ 011-24651334 ಮೂಲಕ ಕಳುಹಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ ತಿಳಿಸಿದ್ದಾರೆ.