ಕುಶಾಲನಗರ, ಜೂ. 23: ಅಧಿಕಾರಿಯಿಂದ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಟಗೊಂಡಿರುವ ವರದಿಗೆ ಕುಶಾಲನಗರ ಪತ್ರಕರ್ತ ಮುಸ್ತಾಫ ಸ್ಪಷ್ಟೀಕರಣ ನೀಡಿದ್ದಾರೆ. ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್ ಅವರಿಂದ ಯಾವದೇ ಸಂದರ್ಭ ತಾನು ಹಣಕ್ಕಾಗಿ ಬೇಡಿಕೆ ಇಟ್ಟಿರುವದಿಲ್ಲ.
ನಿರ್ಮಿತಿ ಕೇಂದ್ರದ ಕಾಮಗಾರಿಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು ಅಧಿಕಾರಿಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ತನಗೆ ನೀಡಿದ್ದು ಅಕ್ರಮ ಆಸ್ತಿಯ ಬಗ್ಗೆ ಮಾಧ್ಯಮದಲ್ಲಿ ಸಮಗ್ರ ವರದಿ ಮಾಡುವಂತೆ ಕೋರಿದ್ದರು.
ಈ ಹಿನೆÀ್ನಲೆಯಲ್ಲಿ ಸಚಿನ್ ತನಗೆ ಆತ್ಮೀಯರಾಗಿದ್ದ ಕಾರಣ ಪಿತೂರಿಯ ಕುರಿತಾಗಿ ತಾನು ಸಚಿನ್ ಅವರ ಗಮನಕ್ಕೆ ತಂದಿದ್ದೇನೆ. ಈ ಸಂಬಂಧ ಅವರೊಂದಿಗೆ ಕೆಲವು ಬಾರಿ ದೂರವಾಣಿ ಸಂಪರ್ಕ ಮಾಡಿರುತ್ತೇನೆಯೇ ಹೊರತು ಯಾವದೇ ತರಹದ ಬೆದರಿಕೆ ಅಥವಾ ಹಣದ ಬೇಡಿಕೆ ಇಟ್ಟಿರುವದಿಲ್ಲ. ತನ್ನನ್ನು ಈ ಪ್ರಕರಣದಲ್ಲಿ ವಿನಾಕಾರಣ ಬಲಿಪಶು ಮಾಡಲಾಗಿದೆ ಎಂದು ಮುಸ್ತಾಫ ಸ್ಪಷ್ಟಪಡಿಸಿದ್ದಾರೆ.