ಮಡಿಕೇರಿ, ಜೂ. 24: ಕುಟ್ಟದ ಹೆದ್ದಾರಿಗೆ ಹೊಂದಿಕೊಂಡಿರುವ ಶ್ರೀ ಕೃಷ್ಣ ಗುಡಿಯ ವಿಗ್ರಹ ಕಳ್ಳತನವಾಗಿ ರುವ ಕುರಿತು ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಿನ್ನೆ ಬೆಳಿಗ್ಗೆ ಅರ್ಚಕ ಕೆ.ಕೆ. ತಂಗರಾಜ್ ಎಂಬವರು ಪೂಜೆ ಸಲ್ಲಿಸಿದ್ದಲ್ಲದೆ, ಗುಡಿಗೆ ಬೀಗಹಾಕಿ ಬಂದಿದ್ದು, ಇಂದು ಬೆಳಿಗ್ಗೆ ಎಂದಿನಂತೆ ಪೂಜೆಗೆ ತೆರಳುವಾಗ ಕಳ್ಳತನ ನಡೆದಿರುವದು ಬೆಳಕಿಗೆ ಬಂದಿದೆ. (ಮೊದಲ ಪುಟದಿಂದ) ಬಾಗಿಲ ಬೀಗ ಮುರಿದಿರುವ ಕಳ್ಳರು ಪಂಚಲೋಹದ ವಿಗ್ರಹ ಕದ್ದೊಯ್ದಿರುವ ಬಗ್ಗೆ ದೊರೆತ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿರುವದಾಗಿ ಠಾಣಾಧಿಕಾರಿ ಶಕುಂತಲಾ ಖಚಿತಪಡಿಸಿದ್ದಾರೆ. -ತಿಮ್ಮು