ಗೋಣಿಕೊಪ್ಪ ವರದಿ, ಜೂ. 25: ಇಲ್ಲಿನ ಕಾವೇರಿ ಮಹಿಳಾ ಸಂಘದ ಸದಸ್ಯರ ಸಭೆ ತಾ. 29 ರಂದು ಮಧ್ಯಾಹ್ನ 2 ಗಂಟೆಗೆ ಮಹಿಳಾ ಸಮಾಜದಲ್ಲಿ ನಡೆಯಲಿದೆ. ಸದಸ್ಯರು ಸಭೆಗೆ ಆಗಮಿಸಿ ಸಲಹೆ ಸೂಚನೆ ನೀಡಬೇಕು ಎಂದು ಕಾವೇರಿ ಮಹಿಳಾ ಸಂಘದ ಆಡಳಿತ ಮಂಡಳಿ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.