ಚೆಟ್ಟಳ್ಳಿ, ಜೂ. 25: ಚೆಟ್ಟಳ್ಳಿ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿರುವ ಸರ್ವೆ ನಂಬರ್ 49/13 ರಲ್ಲಿ 2.30 ಏಕರೆ ಸರಕಾರಿ ಜಾಗವೆಂದು ಸರಕಾರಿ ಸರ್ವೇಯಲ್ಲಿ ಗುರುತಿಸಿದರೂ ಕಂದಾಯ ಅಧಿಕಾರಿಗಳು ಜಾಗವನ್ನು ಇಲಾಖೆಯ ಸುಪರ್ದಿಗೆ ಪಡೆಯಲು ಮೀನಾ ಮೇಷ ಎಣಿಸುತ್ತಿರುವ ಬಗ್ಗೆ ಚೆಟ್ಟಳ್ಳಿ ಪಂಚಾಯಿತಿ ಸದಸ್ಯರು ಅಸಮಾಧಾನÀ ವ್ಯಕ್ತಪಡಿಸಿದ್ದಾರೆ.

ಸೋಮವಾರಪೇಟೆ ತಾಲೂಕು ಸುಂಟಿಕೊಪ್ಪ ಹೋಬಳಿಯ ಚೇರಳ ಗ್ರಾಮದ ಚೆಟ್ಟಳ್ಳಿ ಪಂಚಾಯಿತಿಗೆ ಒಳಪಡುವ ಸರ್ವೆ ನಂ. 49/13ರಲ್ಲಿ 2.30 ಏಕರೆ ಜಾಗ ಸರಕಾರಿ ಪೈಸಾರಿಯಾಗಿದ್ದು, 2107ರ ಜೂನ್ 6 ರಂದು ಚೆಟ್ಟಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖಾ ಸಿಬ್ಬಂದಿಗಳು ಒತ್ತುವರಿಯಾದ ಸರಕಾರಿ ಪೈಸಾರಿ ಜಾಗವನ್ನು ಗುರುತಿಸಿ ಅಲ್ಲಿ ಚೆಟ್ಟಳ್ಳಿಯ ಕಸವನ್ನು ಹಾಕಲು, ಸಾರ್ವಜನಿಕರ ಸ್ಮಶಾನಕ್ಕೆ, ನಿವೇಶನ ರಹಿತ ರೈತರಿಗೆ ವಸತಿ ನಿರ್ಮಿಸಲು ಹಾಗೂ ಅಂಗನವಾಡಿ ಕಟ್ಟಡಕ್ಕೆ ಜಾಗ ಕಾಯ್ದಿರಿಸಲು ಪಂಚಾಯಿತಿ ಸಭೆಯಲ್ಲಿ ನಿರ್ಣಯ ಮಾಡಲಾಯಿತು. ಅದರಂತೆ ಫೆಬ್ರವರಿ 5ರಂದು ತಾಲೂಕು ಮೋಜಿಣಿದಾರರು ಜಾಗವನ್ನು ಸರ್ವೆ ಮಾಡಿ ಗುÀರುತಿಸಿ ಅಳತೆಮಾಡಿ ನಕ್ಷೆ ನೀಡಿದ್ದರು. ಜಾಗವು ಸರಕಾರಿ ಪೈಸಾರಿ ಜಾಗಕ್ಕೆ ಸೇರಿರುವದರಿಂದ ತಾ. 13ರಂದು ಕಂದಾಯ ಇಲಾಖಾಧಿಕಾರಿಗಳು ಚೆಟ್ಟಳ್ಳಿ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಪತ್ರ ಬರೆದು ಒತ್ತುವರಿಯಾದ ಸರಕಾರಿ ಜಾಗವÀನ್ನು ಸುಪರ್ದಿಗೆ ನೀಡಬೇಕು ಇಲ್ಲವೇ ಇಲಾಖೆಗೆ ಸೇರಿದ ಮತ್ತು ಮಂಜೂರಾದ ಜಾಗದ ದಾಖಲೆಗಳನ್ನು ನೀಡಬೇಕೆಂದು ತಿಳಿಸಿದ್ದಾರೆ.

ಆದರೆ ಕಂದಾಯ ಅಧಿಕಾರಿಗಳೇ ಜಾಗವನ್ನು ಇಲಾಖೆಯ ಸುಪರ್ದಿಗೆ ಪಡೆಯಲು ಹಿಂದೇಟು ಹಾಕುತಿದ್ದಾರೆ. ಶೀಘ್ರದಲ್ಲಿ ಜಾಗವನ್ನು ಪಡೆದು ಚೆಟ್ಟಳ್ಳಿಯ ಮಾರುಕಟ್ಟೆಯ ಬಳಿ ಕಸದ ಕೊಂಪೆಯನ್ನು ಬದಲಾಯಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುವದರ ಜೊತೆಗೆ ಸರ್ಕಾರಿ ಉದ್ದೇಶಕ್ಕೆ ಬಳಸಿಕೊಳ್ಳಲು ಕ್ರಮಕೈಗೊಳ್ಳಬೇಕಿದೆ.

ಅಲ್ಲದೆ, ಈರಳೆವಳಮುಡಿ ಗ್ರಾಮದ ಸ.ನಂ 28/1ರಲ್ಲೂ 4.68 ಏಕರೆ ಸರಕಾರಿ ಪೈಸಾರಿ ಜಾಗ ಟಾಟಾ ಕಾಫಿಯ ಸುಪರ್ದಿಯಲ್ಲಿದ್ದು, ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

-ಕರುಣ್ ಕಾಳಯ್ಯ