ಹೆಬ್ಬಾಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹೆಬ್ಬಾಲೆ ಶಾಲಾ ಮುಂಭಾಗ ಹಾಗೂ ಮೈದಾನದ ಸುತ್ತಲು ನೆಲ್ಲಿ, ನೇರಳೆ, ಹಲಸು ಗಿಡಗಳನ್ನು ನಾಟಿ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಗಿದೆ. ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಸರೋಜಮ್ಮ ಅವರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ ಮಕ್ಕಳು ತಮ್ಮ ಪರಿಸರದ ಸುತ್ತಮುತ್ತ ಗಿಡಗಳನ್ನು ಬೆಳೆಸುವ ಮೂಲಕ ಸುಂದರ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು. ಶಿಕ್ಷಕಿ ಯದುಕುಮಾರಿ ಪರಿಸರದ ಬಗ್ಗೆ ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕ ವಿನೋದ್‍ಕುಮಾರ್ ಪರಿಸರ ಕಾರ್ಯಕ್ರಮದ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಪಂಚಾಯತ್ ಸದಸ್ಯ ದೇವಮ್ಮ, ಶಾಲಾ ಶಿಕ್ಷಕಿ ಮೀನಾಕ್ಷಿ, ಧರ್ಮಸ್ಥಳ ಸಂಘದ ಸೇವಾಪ್ರತಿನಿದಿಗಳಾದ ಪ್ರಮೀಳಾ, ಲಕ್ಷ್ಮಿ, ಕಲ್ಪನಾ, ಸುಮಲತಾ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಬಬಿತಾ ನೆರವೇರಿಸಿದರು.ಕರಿಕೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚೆತ್ತುಕಾಯ ಬರೂಕ ಜಲ ವಿದ್ಯುತ್ ಘಟಕವು ಪ್ರತಿ ವರ್ಷದಂತೆ ಈ ಬಾರಿ ಕೂಡ ನೂರಾರು ಗಿಡಗಳನ್ನು ನೆಡುವದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿತು. ಈ ಸಂದರ್ಭ ಸಂಸ್ಥೆಯ ಮೇಲ್ವಿಚಾರಕ ರಾಜಶೇಖರ್, ಇಂಜಿನಿಯರ್ ಪ್ರಸಾದ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ವೀರಾಜಪೇಟೆ: ವೀರಾಜಪೇಟೆಯ ಶನೀಶ್ವರ ಭಕ್ತಮಂಡಳಿ ಮತ್ತು ಜೀವನ ಜ್ಯೋತಿ ಟ್ರಸ್ಟ್‍ನ ಸಂಯುಕ್ತ ಆಶ್ರಯದಲ್ಲಿ ಸಂತ ಅನ್ನಮ್ಮ ಪದವಿ ಕಾಲೇಜಿನ ಆವರಣದಲ್ಲಿ ವನ ಮಹೋತ್ಸವ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಮೇರಿಯಂಡ ಕೆ. ಸಂಕೇತ್ ಪೂವಯ್ಯ ಕಾರ್ಯಕ್ರಮವನ್ನು ಗಿಡ ನೆಡುವದರ ಮೂಲಕ ಉದ್ಘಾಟಿಸಿದರು. ಪ್ರಾಂಶುಪಾಲ ರೆ.ಫಾ. ಮದುಲೈ ಮುತ್ತು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶನೀಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಯುವರಾಜ್ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀವನ ಜ್ಯೋತಿ ಟ್ರಸ್ಟ್‍ನ ಅಜಯ್‍ರಾವ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹೆಚ್.ಆರ್. ಅರ್ಜುನ್ ಉಪನ್ಯಾಸಕರುಗಳಾದ ಶಾಂತಿಭೂಷಣ್ ಹಾಗೂ ಹೇಮಂತ್ ಹಾಜರಿದ್ದರು.

ಕೂಡಿಗೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯ ವತಿಯಿಂದ ಹೆಬ್ಬಾಲೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಮಾಹಿತಿ ಕಾರ್ಯಾಗಾರ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಶಾಲೆಯ ಮುಂಭಾಗದಲ್ಲಿ ನೆಲ್ಲಿ, ನೇರಳೆ, ಹಲಸು ಗಿಡಗಳನ್ನು ನೆಡಲಾಯಿತು. ನಂತರ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನ ವಿತರಣೆ ಮಾಡಲಾಯಿತು. ವಲಯದ ಮೇಲ್ವಿಚಾರಕ ವಿನೋದ್‍ಕುಮಾರ್, ಶಿಕ್ಷಕರಾದ ಯಧಕುಮಾರಿ, ಮೀನಾಕ್ಷಿ ಪರಿಸರದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಸರೋಜಮ್ಮ, ದೇವಮ್ಮ, ಶಾಲಾ ಶಿಕ್ಷಕರು, ಸೇವಾ ಪ್ರತಿನಿಧಿಗಳಾದ ಪ್ರಮೀಳಾ, ಲಕ್ಷ್ಮಿ, ಕಲ್ಪನಾ, ಸುಮಲತಾ ಇದ್ದರು.ಕೂಡಿಗೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕೂಡಿಗೆ ವಲಯದ ಗುಮ್ಮನಕೊಲ್ಲಿ ಕಾರ್ಯಕ್ಷೇತ್ರದ ಚಾಮುಂಡೇಶ್ವರಿ ಬಡಾವಣೆಯ ಚೌಡೇಶ್ವರಿ ಬನದ ಸುತ್ತಮುತ್ತ ಓಕ್ಕೂಟದ ಸದಸ್ಯರು ಗಿಡನೆಡುವ ಮೂಲಕ ವಿಶ್ವಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು

ವಲಯದ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸದಸ್ಶರನ್ನುದ್ದೇಶಿಸಿ ಮಾತನಾಡಿ, ಪ್ರತಿಯೊಬ್ಬ ವ್ಶಕ್ತಿಯು ವರ್ಷಕೊಂದು ಗಿಡವನ್ನು ನಾಟಿ ಮಾಡಿ ಪೋಷಿಸಿದರೆ ಜೀವಿಗಳ ಉಸಿರಾಟಕ್ಕೆ ಆಮ್ಲಜನಕವನ್ನು ಪೂರೈಸಿದ ತೃಪ್ತಿ ಸಿಗುವದಲ್ಲದೆ ಮುಂದಿನ ಪೀಳಿಗೆಗೂ ತನ್ನದೇ ಆದ ಕೊಡುಗೆಯನ್ನು ನೀಡಿದಂತಾಗುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಶಕ್ತಿಗೆ ದಿನವೊಂದಕ್ಕೆ ಎರಡು ಸಿಲಿಂಡರ್ ನಷ್ಟು ಆಮ್ಲಜನಕದ ಅವಶ್ಶಕತೆ ಇದ್ದು, ಇದರ ಪೂರೈಕೆಯು ಗಿಡಮರಗಳಿಂದ ಮಾತ್ರ ಸಾಧ್ಯ. ಹೆಚ್ಚಾಗಿ ಗಿಡಗಳನ್ನು ನೆಟ್ಟು ಬೆಳೆಸಬೇಕು ಪೂಜ್ಯರ ಆಶಯದಂತೆ ಎಲ್ಲರೂ ಒಂದಾಗಿ ಪರಿಸರ ಸಂರಕ್ಷಣೆಯಲ್ಲಿ ಶ್ರಮಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಗುಮ್ಮನಕೊಲ್ಲಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸುವರ್ಣ ಒಕ್ಕೂಟದ ಅಧ್ಯಕ್ಷರುಗಳಾದ ಶರ್ಮಿಳಾ, ವನಿತಾ, ಪದಾಧಿಕಾರಿಗಳಾದ ಪುಷ್ಪಾವತಿ, ಮೈಮುನಾ, ಚೌಡೇಶ್ವರಿ ದೇವಸ್ಥಾನ ಕಮಿಟಿಯ ರಾಮಣ್ಣ ಭರತ್ ಹಾಗೂ ಕೂಡುಮಂಗಳೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ನಿರ್ಮಲಾ ಹಾಗೂ ಒಕ್ಕೂಟದ ಸದಸ್ಶರುಗಳು ಉಪಸ್ಥಿತರಿದ್ದರು.