ಚೆಟ್ಟಳ್ಳಿ, ಜೂ. 24: ಚೆಟ್ಟಳ್ಳಿ ಸಮೀಪದ ಪೊನ್ನತ್‍ಮೊಟ್ಟೆ ಎಂಬಲ್ಲಿ ಮುರುಳಿ ಎಂಬವರು ರಾತ್ರಿ ಎಂದಿನಂತೆ ಇತ್ತೀಚೆಗೆ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ (ಕೆಎ. 12 ಜೆ7028) ತಾ. 10ರ ಬೆಳಿಗ್ಗೆ 6 ಗಂಟೆಗೆ ನೋಡಿದಾಗ ಕಾಣೆಯಾಗಿತ್ತು. ಗಾಬರಿಗೊಂಡ ಮುರುಳಿ ಸಮೀಪದಲ್ಲೆಲ್ಲ ಹುಡುಕಾಡಿದರು. ಅಕ್ಕÀಪಕ್ಕದವರಿಗೆಲ್ಲ ತಿಳಿಸಿದರೂ ಎಲ್ಲೂ ಸಿಗಲಿಲ್ಲ. ಅದೇ ದಿನ ರಾತ್ರಿ ಸಮೀಪದ ಶ್ರೀ ಶನೀಶ್ವರ ದೇವಾಲಯದಲ್ಲಿ ಹುಂಡಿ ಒಡೆದು ಹಣ ದೋಚಿರುವದು, ಸರಕಾರಿ ಶಾಲೆಯ ಬಾಗಿಲನ್ನು ಮುರಿದು ಕಳವಿಗೆ ಯತ್ನ, ಹತ್ತಿರದ ಮನೆಯೊಂದರಲ್ಲಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವದು. ಬೆಳಕಿಗೆ ಬಂದಿತ್ತು. ಈ ಎಲ್ಲಾ ಕೃತ್ಯದಲ್ಲಿ ಒಂದೇ ತಂಡದ ಕೈವಾಡವಿರಬಹುದೆಂದು ಸಂಶಯಗೊಂಡು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್, ಚೆಟ್ಟಳ್ಳಿ ಎಎಸ್‍ಐ ಪೂವಪ್ಪ ಹಾಗೂ ಸಿಬ್ಬಂದಿ, ಶ್ವಾನದಳÀ, ಬೆರಳÀಚ್ಚು ತಜ್ಞರು ಭೇಟಿ ನೀಡಿ ಕಳುವಾದ ಸ್ಥಳದಲ್ಲೆÉಲ್ಲ ಪರಿಶೀಲಿಸಿ ಮಹಜರು ನಡೆಸಿ ಕೇಸು ದಾಖಲಿಸಿಕೊಂಡಿದ್ದರು.
ಕಳೆದ ಎರಡು ದಿನಗಳ ಹಿಂದೆ ಸಾವರ್Àಜನಿಕರ ಮಾಹಿತಿಯ ಮೇರೆ ಕುಶಾಲನಗರದ ಗುಡ್ಡೆಹೊಸೂರು ಸಮೀಪ ತೆಪ್ಪದಕಂಡಿಯ ತೂಗು ಸೇತುವೆಯ ಸಮೀಪ, 5 ದಿನಗಳಿಂದ ಅನಾಥವಾಗಿ ಬಿದ್ದಿದ್ದ ಬೈಕ್ ಅನ್ನು ಪೊಲೀಸ್ ಸಿಬ್ಬಂದಿಗಳು ಠಾಣೆಗೆ ತಂದಿದ್ದರು. ಆನ್‍ಲೈನಲ್ಲಿ ಮಾಹಿತಿ ಪಡೆದಾಗ ಮುರುಳಿಯ ಹೆಸರು ಹಾಗೂ ವಿಳಾಸ ದೊರೆತ ಮೇರೆಗೆ ಕುಶಾಲನಗರ ಪೊಲೀಸ್ ಸಿಬ್ಬಂದಿ ಮುರುಳಿಗೆ ಫೋನ್‍ನಲ್ಲಿ ಸಂಪರ್ಕಿಸಿ ಬೈಕಿನ ಮಾಹಿತಿ ಪಡೆದಾಗ ಕಳ್ಳತನವಾಗಿದ್ದ ಬೈಕ್ ಅದಾಗಿತ್ತು. ಮಡಿಕೇರಿ ಗ್ರಾಮಾಂತರ ಠಾಣೆÉಗೆ ಮಾಹಿತಿ ನೀಡಿ ಚೆಟ್ಟಳ್ಳಿ ಉಪಠಾಣೆಯ ಸಿಬ್ಬಂದಿ ಸಜನ್‍ನೊಂದಿಗೆ ತೆರಳಿ ಬೈಕ್ ಅನ್ನು ಕುಶಾಲನಗರ ಪೊಲೀಸ್ ಠಾಣೆಯಿಂದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ತಂದು ಒಪ್ಪಿಸಲಾಯಿತು.
ಮುರುಳಿ ರಾತ್ರಿ ಕೆಲಸ ಮುಗಿಸಿ ಬಂದು ಬೈಕ್ ನಿಲ್ಲಿಸುವಾಗ ಒಂದು ಲೀಟರ್ ಪೆಟ್ರೋಲ್ ಮಾತ್ರ ಇದ್ದು, ಕಳುವಾದ ನಂತರ ಕುಶಾಲನಗರದಲ್ಲಿ ಸಿಕ್ಕಿದಾಗ ಸುಮಾರು ಮುಕ್ಕಾಲು ಟ್ಯಾಂಕ್ ಪೆಟ್ರೋಲ್ ಇತ್ತೆÉಂದು ತಿಳಿದುಬಂದಿದೆ. ಬೈಕ್ ಕಳವು ಮಾಡಿದ ಸ್ಥಳದ ಪಕ್ಕದಲ್ಲಿ ಇಫ್ತಾರ್ ಕೂಟಕ್ಕೆ ಬಂದಿದ್ದ ಮಾರುತಿ 800 ಕಾರಿನಿಂದ ಪೆಟ್ರೋಲನ್ನು ಕದ್ದು ಬೈಕಿಗೆ ಹಾಕಿ ಕುಶಾಲನಗರಕ್ಕೆ ತೆರಳಿದ್ದ ಬಗ್ಗೆ ಸಂಶಯ ವ್ಯಕ್ತಗೊಂಡಿದೆ. ಬೈಕ್ ಕಳವಿನ ಕೇಸನ್ನು ದಾಖಲಿಸಿ ಮಡಿಕೇರಿ ನ್ಯಾಯಾಲಯಕ್ಕೆ ಪೊಲೀಸರು ವರದಿ ಸಲ್ಲಿಸಿರುವದರಿಂದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಕಳುವಾದ ಬೈಕ್ ಅನ್ನು ಮುರುಳಿ ಪಡೆಯಬೇಕಿದೆ. ಬೈಕ್ ಕದ್ದವರು ಯಾರು? ಕುಶಾಲನಗರಕ್ಕೆ ಒಯ್ಯಲು ಕಾರಣವೇನು? ಇತರ ಕಳವು ಪ್ರಕರಣಗಳಲ್ಲ್ಲಿ ಯಾರ್ಯಾರ ಕೈವಾಡವಿದೆ ಎಂಬೆಲ್ಲ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಷ್ಟೆ..!!!
-ಕರುಣ್ ಕಾಳಯ್ಯ