ಬೆಂಗಳೂರು, ಜೂ.25 : ಅಧಿಕಾರಕ್ಕೇರಿದ ಒಂದೇ ತಿಂಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ನಡುವಿನ ಮುಸುಕಿನ ಗುದ್ದಾಟ ತೀವ್ರಗೊಂಡಿದ್ದು ರೈತರ ಸಾಲಮನ್ನಾ ವಿಚಾರವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ವಿಧಾನಸೌಧದಲ್ಲಿ ರೈತರ ಸಾಲಮನ್ನಾ ಸಂಬಂಧ ಸಹಕಾರಿ ಬ್ಯಾಂಕುಗಳ ವ್ಯವಸ್ಥಾಪಕ &divound;ರ್ದೇಶಕರ ಸಭೆಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿಯವರು, ಬಜೆಟ್ ಮಂಡನೆ ಮಾಡಬೇಕೋ ಬೇಡವೋ ಚರ್ಚೆ ನಡಿಯುತ್ತಿದೆ. ಲೋಕಸಭಾ ಚುನಾವಣೆ ನಂತರ ಹೊಸ ಬಜೆಟ್ ಮಂಡಿಸಿ ಅಂತಾ ಹೇಳುತ್ತಿದ್ದಾರೆ. ಅಲ್ಲದೆ ನಾನು ಯಾರ ಹಂಗಲ್ಲೂ ಇಲ್ಲ, ಯಾರೂ ಭಿಕ್ಷೆ ಕೊಟ್ಟಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

3 ಆರೋಪಿಗಳಿಗೆ 10 ವರ್ಷ ಜೈಲು

ಅಹಮದಾಬಾದ್, ಜೂ. 25 : 2002ರ ನರೋಡ ಪಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸೋಮವಾರ ಮೂವರು ಅಪರಾಧಿಗಳಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಮೂರ್ತಿ ಹರ್ಷಾ ದೇವಾನಿ ಮತ್ತು ನ್ಯಾಯಮೂರ್ತಿ ಎ.ಎಸ್.ಸುಪೆಯಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಅಪರಾಧಿಗಳಾದ ಪಿಜೆ ರಜಪೂತ್, ರಾಜಕುಮಾರ್ ಚೌಮಾಲ್ ಮತ್ತು ಉಮೇಶ್ ಭರ್ವಾಡ್ ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಕಳೆದ ಏಪ್ರಿಲ್ 20ರಂದು 16 ಅಪರಾಧಿಗಳ ಪೈಕಿ ಈ ಮೂವರಿಗೆ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟಿಸಿರಲಿಲ್ಲ. ಈ ಮೂವರು ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಕೋರಿದ್ದರು. ಹೀಗಾಗಿ ಇಂದು ಮೂವರು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದ ಕೋರ್ಟ್, ಆರು ವಾರಗಳಲ್ಲಿ ಪೆÇಲೀಸರಿಗೆ ಶರಣಾಗುವಂತೆ ಸೂಚಿಸಿದೆ. ಏಪ್ರಿಲ್ 20ರಂದು ನರೋಡ ಪಟಿಯಾ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ಅವರನ್ನು ಖುಲಾಸೆಗೊಳಿಸಿದ್ದ ಗುಜರಾತ್ ಹೈಕೋರ್ಟ್, ಬಜರಂಗದಳದ ಮುಖಂಡ ಬಾಬು ಬಜರಂಗಿ ಅಪರಾಧವನ್ನು ಎತ್ತಿ ಹಿಡಿದಿತ್ತು.

ವಿಷದೊಂದಿಗೆ ಕಚೇರಿಗೆ ಬಂದ ವೃದ್ಧೆ

ವಿಜಯಪುರ, ಜೂ.25 : ಪಿಂಚಣಿ ಹಣ ನೀಡದ್ದಕ್ಕೆ ಬೇಸತ್ತು ವೃದ್ಧೆಯೋರ್ವರು ತಹಶೀಲ್ದಾರ್ ಕಚೇರಿಗೆ ವಿಷದ ಬಾಟಲಿ ಸಮೇತ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ವಿಜಯಪುರದ ಸಿಂಧಗಿಯಲ್ಲಿ ನಡೆದಿದೆ. ಸಿಂದಗಿ ತಾಲೂಕಿನ ಸಾಸಾಬಾಳ ಗ್ರಾಮದ ನೀಲವ್ವ ರೋಡಗಿ (73) ಪಿಂಚಣಿಗಾಗಿ ಪರದಾಡುತ್ತಿರುವ ವಯೋವೃದ್ಧೆ. ನೀಲವ್ವ ಅವರಿಗೆ ತಿಂಗಳಿಗೆ 500 ರೂ. ಪಿಂಚಣಿ ಬರುತ್ತಿತ್ತು. ಆದ್ರೆ ಕಳೆದ ಒಂದು ವರ್ಷದಿಂದ ಪಿಂಚಣಿ ಹಣ &divound;ೀಡದೆ ಪೆÇೀಸ್ಟ್ ಮಾಸ್ಟರ್ ಸತಾಯಿಸುತ್ತಿದ್ದನಂತೆ. ನೀಲವ್ವ ಏಕಾಂಗಿ ವೃದ್ಧೆ ಆಗಿದ್ದು, ಪಿಂಚಣಿ ಹಣದಿಂದಲೆ ಜೀವನ ನಡೆಸುತ್ತಿದ್ದಾರೆ.