ಕೂಡಿಗೆ, ಜೂ. 26 : ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಭೆಗಳಲ್ಲಿ ತೀರ್ಮಾನಿಸಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ರೂ.16 ಲಕ್ಷ ಲಾಭಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್‍ಕುಮಾರ್ ಹೇಳಿದರು.

ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಬೆಳವಣಿಗೆಗೆ ಹಾಗೂ ಕಳೆದ ವಾರ್ಷಿಕ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ರೈತರ ಪ್ರಗತಿಗೆ ಸಹಕಾರಿಯಾಗಿರುತ್ತೇವೆ. ಈ ಸಾಲಿನಿಂದ ರೈತರ ಆರ್‍ಟಿಸಿಗೆ ಅನುಗುಣವಾಗಿ ವಾರ್ಷಿಕ ಶೇ.15 ರಷ್ಟು ದರದಲ್ಲಿ ಗೊಬ್ಬರ ಸಾಲ ನೀಡುವ ಕ್ರಮಕೈಗೊಳ್ಳಲಾಗಿದೆ. ಸಂಘವು 3632 ಸದಸ್ಯರನ್ನು ಹೊಂದಿದ್ದು, ಠೇವಣಿ ಹಣವಾಗಿ 784.98 ಲಕ್ಷ, ಇದುವರೆಗೂ ಸದಸ್ಯರಿಗೆ ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ. ರೈತರಿಗೆ ಕೆಸಿಸಿ ಸಾಲ ರೂ. 546.48 ಲಕ್ಷ, ಜಾಮೀನು ಸಾಲು ರೂ. 5.00 ಲಕ್ಷ, ನಿರಖು ಠೇವಣಿ ರೂ.2.32 ಲಕ್ಷ, ಸ್ವಸಹಾಯ ಗುಂಪು ರೂ.10.08 ಲಕ್ಷ, ಭವಿಷ್ಯನಿಧಿ ಸಾಲ ರೂ.11.16 ಲಕ್ಷ, ಆಭರಣ ಸಾಲ ರೂ.217.53 ಲಕ್ಷ, ವ್ಯಾಪಾರಭಿವೃದ್ಧಿ ಸಾಲ 76.89 ಲಕ್ಷ, ಪಿಗ್ಮಿ ಸಾಮಾನ್ಯ ಸಾಲ 246.77, ಆಸಾಮಿ ಸಾಲ 3.81 ಲಕ್ಷ ರೂ ಹಣವನ್ನು ನೀಡಲಾಗಿದ್ದು, ಸಂಘವು 2017-18ನೇ ಸಾಲಿನಲ್ಲಿ ರೂ.16 ಲಕ್ಷ ಲಾಭವನ್ನು ಸಂಘ ಗಳಿಸಿದೆ ಎಂದರು.

ಸಂಘದ ಸದಸ್ಯರಾದ ಕೆ. ಸಿ. ನಂಜುಂಡಸ್ವಾಮಿ, ಕೆ. ಆರ್. ರಂಗಸ್ವಾಮಿ, ತಮ್ಮಣ್ಣೇಗೌಡ, ಕೆ.ಕೆ.ಸೋಮಣ್ಣ, ಕೆ. ಬಿ. ಸಣ್ಣಪ್ಪ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಹಿಂದಿನ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ, 2017-18ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮತ್ತು ಅದರ ಮೇಲಿನ ಸಮಿತಿಯ ವರದಿಯ ಪರಿಶೀಲನೆ ನಡೆಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

ಸಭೆಯಲ್ಲಿ ಕೂಡಿಗೆ ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲ, ತಾ.ಪಂ ಸದಸ್ಯ ಗಣೇಶ್, ಸಂಘದ ಉಪಾಧ್ಯಕ್ಷ ವಿ. ಎಲ್. ಪ್ರಕಾಶ್, ನಿರ್ದೇಶಕರಾದ ಟಿ. ಕೆ. ವಿಶ್ವನಾಥ್, ಟಿ. ಪಿ. ಹಮೀದ್, ಕೆ. ಮಹೇಶ್‍ಕಾಳಪ್ಪ, ಕೆ. ಜಿ. ಮಂಜಯ್ಯ, ಹೆಚ್. ಆರ್. ಪಾರ್ವತಮ್ಮ, ಕೆ. ಜೆ. ಮೋಜಿನಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಪಿ. ಮೀನಾ ಹಾಗೂ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಕೆ. ಕೆ. ಭೋಗಪ್ಪ ಸ್ವಾಗತಿಸಿ, ಎಸ್. ಎನ್. ರಾಜಾರಾವ್ ವಂದಿಸಿದರು.