ಬೆಂಗಳೂರು, ಜೂ.26 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೂತನ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹೈಕಮಾಂಡ್ ನ ಎಐಸಿಸಿ ಮುಖಂಡರಿಬ್ಬರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಮಾತನಾಡುವ ರೀತಿ ಸರಿ ಇಲ್ಲ. ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಸಿದ್ದರಾಮಯ್ಯ ಅವರೇ ಕಾರಣ ಆಗಿದ್ದಾರೆ. ಪದೇ ಪದೇ ಈ ರೀತಿ ಆದರೆ ಆಡಳಿತ ನಡೆಸೋದು ಹೇಗೆ. ಕಾಂಗ್ರೆಸ್ ನಾಯಕರ ಇಂಥ ನಡೆಗೆ ನೀವೇ ಕಡಿವಾಣ ಹಾಕಬೇಕು ಎಂದು ದೂರಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಒಮ್ಮೆ ಅಪಸ್ವರ ಶುರುವಾದರೆ ದೊಡ್ಡ ಪ್ರಮಾಣಕ್ಕೆ ಹೋಗುತ್ತದೆ. ಬಜೆಟ್ ಮಂಡನೆ ಬಗ್ಗೆ ಸಿದ್ದರಾಮಯ್ಯ ಅವರು ಮಾತಾಡಿದ್ದು, ಸರಿಯಲ್ಲ. ಸಮನ್ವಯ ಸಮಿತಿಯಲ್ಲಿ ಏನೇ ವಿಚಾರ ಇದ್ದರೂ ಚರ್ಚೆ ಮಾಡಲಿ. ಬಹಿರಂಗ ಹೇಳಿಕೆ ಕೊಟ್ಟು ಸರ್ಕಾರಕ್ಕೆ ಮುಜುಗರ ಉಂಟು ಮಾಡೋದು ಬಿಡಬೇಕು ಎಂದು ಎಐಸಿಸಿ ನಾಯಕರ ಜೊತೆ ಕುಮಾರಸ್ವಾಮಿ ಖಡಕ್ಕಾಗಿ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಾಸ್ ಪೆÇೀರ್ಟ್‍ಗೆ ವಿವಾಹ ಪತ್ರ ಬೇಡ

ನವದೆಹಲಿ, ಜೂ.26 : ಇನ್ನು ಮುಂದೆ ಪಾಸ್ ಪೆÇೀರ್ಟ್ ಪಡೆಯಲು ಯಾವದೇ ಕಚೇರಿಯಲ್ಲೂ ವಿವಾಹ ಪ್ರಮಾಣ ಪತ್ರ ತೋರಿಸಬೇಕಾದ ಅಗತ್ಯವಿಲ್ಲ ಎಂಬದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ವಿಚ್ಛೇದಿತ ಮಹಿಳೆಯರು ತಮ್ಮ ಮಾಜಿ ಪತಿ ಮತ್ತು ಅವರ ಮಕ್ಕಳ ಹೆಸರನ್ನು ತುಂಬಬೇಕಾದ ಅಗತ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಪಪಡಿಸಿದೆ. ಪಾಸ್ ಪೆÇೀರ್ಟ್ ದಿವಸದ ಅಂಗವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸದಸ್ಯರು ಹಾಗೂ ಅನೇಕ ಪಾಸ್ ಪೆÇೀರ್ಟ್ ಸೇವಾ ಕೇಂದ್ರಗಳ ಅಧಿಕಾರಿಗಳೊಂದಿಗೆ ಮಾತನಾಡಿದ ಸುಷ್ಮಾ ಸ್ವರಾಜ್ , ವಿವಾಹಿತ ಪುರುಷ ಹಾಗೂ ಮಹಿಳೆಯರು ಪಾಸ್ ಪೆÇೀರ್ಟ್ ಕಚೇರಿಯಲ್ಲಿ ವಿವಾಹ ಪ್ರಮಾಣ ಪತ್ರ ತೋರಿಸಬೇಕೆಂಬ ಕಾನೂನನ್ನು ರದ್ದುಗೊಳಿಸಿರುವದಾಗಿ ತಿಳಿಸಿದರು. ವಿಚ್ಚೇದಿತ ಪುರುಷ ಹಾಗೂ ಆತನೊಂದಿಗಿರುವ ಮಕ್ಕಳ ಹೆಸರನ್ನು ನಮೂದಿಸಬೇಕೆ ಎಂಬ ಬಗ್ಗೆ ಕೆಲ ವಿಚ್ಚೇದಿತ ಮಹಿಳೆಯರು ದೂರು ಸಲ್ಲಿಸಿದ್ದರು. ನಿಯಮವನ್ನು ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು. ಲಖನೌದ ಪಾಸ್ ಪೆÇೀರ್ಟ್ ಸೇವಾ ಕೇಂದ್ರದಲ್ಲಿ ಮುಸ್ಲಿಮ್ ಗಂಡ ಮತ್ತು ಹಿಂದು ಪತ್ನಿ ನಡುವೆ ಜಗಳ ಉಂಟಾದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

ಚುನಾವಣೆ ಮುನ್ನ ರಾಮಮಂದಿರ ನಿರ್ಮಾಣ

ಅಯೋಧ್ಯೆ ಜೂ.26 : 2019ರ ಲೋಕಸಭೆ ಚುನಾವಣೆಗೂ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ, ಪ್ರಜಾ ಪ್ರಭುತ್ವ ವ್ಯವಸ್ಥೆಯಾಗಿರುವದರಿಂದ ನಂಬಿಕೆಯಿಟ್ಟು ತಾಳ್ಮೆಯಿಂದಿರುವಂತೆ ಹಿಂದೂ ಸಂತರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಭರವಸೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ನಡೆದ ಹಿಂಧೂ ಸಂತರ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಮಾತನಾಡಿದರು, ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ, ಮೊಗಲ್ ರಾಜ ಬಾಬಪ್ ರಾಮ ಮಂದಿರ ನಾಶ ಮಾಡಲು ಕೋರ್ಟ್ ಆದೇಶ ತಂದಿರಲಿಲ್ಲ ಎಂಬ ಹೇಳಿಕೆಗೆ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದರು. ನಾವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ, ನ್ಯಾಯಾಂಗ ವ್ಯವಸ್ಥೆಯಿದೆ ಅದಕ್ಕೆ ಅದರದ್ದೇ ಆದ ನೀತಿ ನಿಯಮಗಳಿವೆ, ಇದನ್ನೆಲ್ಲಾ ನಾವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ಬಾಬಾ ರಾಮದೇವ್ ಮೇಣದ ಪ್ರತಿಮೆ

ನವದೆಹಲಿ, ಜೂ.26 : ಖ್ಯಾತ ಯೋಗಗುರು ಬಾಬಾ ರಾಮದೇವ್ ಅವರ ಮೇಣದ ಪ್ರತಿಮೆಯನ್ನು ಲಂಡನ್ನ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿದೆ. ಆ ಮೂಲಕ ಲಂಡನ್ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ಭಾರತ ಮೂಲದ ಯೋಗಿ ಯೊಬ್ಬರ ಮೇಣದ ಪ್ರತಿಮೆಯನ್ನು ಇದೇ ಮೊದಲ ಬಾರಿಗೆ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಯೋಗಿಯೊಬ್ಬರ ಮೇಣದ ಪ್ರತಿಮೆಯ ಗರಿಮೆಗೆ ರಾಮ್ದೇವ್ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ರಾಮ್ದೇವ್ ಅವರು ಲಂಡನ್ಗೆ ತೆರಳಿದ್ದಾಗ ಅವರ ಸಂಪೂರ್ಣ ಅಳತೆಯನ್ನು ಸಂಗ್ರಹಾಲಯದಲ್ಲಿ ತೆಗೆದುಕೊಳ್ಳಲಾಗಿತ್ತು. ಇದೀಗ ನಿರ್ಮಾಣವಾಗಿರುವ ಪ್ರತಿಮೆ ಬಗ್ಗೆ ಟ್ವೀಟ್ ಮಾಡಿರುವ ಬಾಬಾ ರಾಮ್ದೇವ್ ಅವರು ಜಗತ್ತಿನಾದ್ಯಂತ ಎಲ್ಲರನ್ನೂ ಆರೋಗ್ಯದಾಯಕ ಜೀವನಶೈಲಿ ಯೋಗದ ಕಡೆಗೆ ಕರೆದೊಯ್ಯಲು ಈ ಪ್ರತಿಮೆ ಸ್ಫೂರ್ತಿದಾಯಕವಾಗಿರುತ್ತದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಆರ್‍ಎಸ್‍ಎಸ್ ಸೇರುವವರ ಸಂಖ್ಯೆ ಹೆಚ್ಚಳ

ಕೋಲ್ಕತ್ತಾ, ಜೂ.26 : ನಾಗ್ಪುರದಲ್ಲಿ ಜೂ.7 ರಂದು ನಡೆದ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ ಬಳಿಕ ಆರ್‍ಎಸ್‍ಎಸ್ ಸೇರುವವರ ಸಂಖ್ಯೆ 4 ಪಟ್ಟು ಹೆಚ್ಚಳವಾಗಿದೆ. ಈ ಕುರಿತು ಆರ್ ಎಸ್‍ಎಸ್ ಮಾಹಿತಿ ನೀಡಿದ್ದು, ಆರ್ ಎಸ್‍ಎಸ್ ಸೇರಲು ಜೂನ್ 1 ರಿಂದ 6 ಅವಧಿಯಲ್ಲಿ ಸಂಸ್ಥೆಯ ವೆಬ್ ಸೈಟ್ನಿಂದ ಸರಾಸರಿ 378 ಅರ್ಜಿಗಳು ಸಲ್ಲಿಕೆಯಾಗುತ್ತಿತ್ತು, ಆದರೆ ಜೂನ್ 7 ರಂದು 1,779 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಬಂಗಾಳದ ಆರ್ ಎಸ್‍ಎಸ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ. ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸಹ ಭಾಗಿಯಾಗಿದಕ್ಕಾಗಿ ಕೃತಜ್ಞತೆ ತಿಳಿಸಿ ಆರ್ ಎಸ್‍ಎಸ್ ಪತ್ರ ಬರೆದಿದೆ. ಸೋಮವಾರ ಈ ಕುರಿತು ಪತ್ರ ಬರೆದಿರುವ ಸಂಘದ ಮನಮೋಹನ್ ವೈದ್ಯ ಅವರು ಪ್ರಣಬ್ ಅವರ ‘ಒಂದು ಭಾರತ’ ಮತ್ತು ‘ಒಂದು ಸಂಸ್ಕೃತಿ’ ಅಭಿಪ್ರಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಮಶಾನದಲ್ಲಿ ಮಲಗಿದ ಟಿಡಿಪಿ ಶಾಸಕ

ಅಮರಾವತಿ ಜೂ.26 : ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಪಲಕೋಳೆಯ ಜನರಲ್ಲಿ ದೆವ್ವದ ಭಯ ಹೋಗಿಸಲು ಟಿಡಿಪಿ ಶಾಸಕ ನಿಮ್ಮಲ ರಾಮ ನಾಯ್ಡುರವರು ಸ್ಮಶಾನದಲ್ಲೇ ಮಲಗಿದ್ದಾರೆ. ಪಶ್ಚಿಮ ಗೋದಾವರಿಯ ಪಲಕೋಳೆ ಎಂಬಲ್ಲಿರುವ ಸ್ಮಶಾನದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ತೆಲಂಗಾಣ ಸರ್ಕಾರ 3 ಕೋಟಿ ರೂಪಾಯಿ ಬಿಡುಗಡೆಗೊಳಿಸಿತ್ತು. ಹೀಗಾಗಿ ಸ್ಮಶಾನದಲ್ಲಿ ಅಭಿವೃದ್ಧಿ ಹಾಗೂ ಕಟ್ಟಡ ನಿರ್ಮಾಣ ಕಾರ್ಯವನ್ನು ಶಾಸಕ ನಾಯ್ಡುರವರು ಹಮ್ಮಿಕೊಂಡಿದ್ದರು. ಆದರೆ ಯಾವೊಬ್ಬ ಊರಿನವರು ಕಾಮಗಾರಿಗೆ ಬರಲು ಸಿದ್ಧರಿರಲಿಲ್ಲ. ರುದ್ರಭೂಮಿಯಲ್ಲಿ ದಿನನಿತ್ಯ ಹೆಣ ಸುಡುತ್ತಾರೆ, ಅಲ್ಲಿ ಭೂತ ಪ್ರೇತಗಳು ಇವೆ ಎಂಬ ಭಯದಿಂದ ದೂರ ಸರಿದಿದ್ದರು. ಜನರಲ್ಲಿದ್ದ ಭಯವನ್ನು ಹೋಗಲಾಡಿಸಲು ಶಾಸಕ ನಾಯ್ಡುರವರು ಸ್ಮಶಾನದಲ್ಲೇ ಮಲಗುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಜೂನ್ 22ರಿಂದ ಮೂರು ದಿನಗಳ ಕಾಲ ಸ್ಮಶಾನದಲ್ಲೇ ಫೆÇೀಲ್ಡಿಂಗ್ ಕಾಟ್ ಮತ್ತು ಸೊಳ್ಳೆ ಪರದೆ ಸಹಾಯದಿಂದ ಮಲಗಿದ್ದಾರೆ. ನಿರಂತರವಾಗಿ ಮೂರು ದಿನ ಸ್ಮಶಾನದಲ್ಲೇ ಬೀಡುಬಿಟ್ಟಿದ್ದ ಶಾಸಕರು ಜನರಿಗೆ, ಸ್ಮಶಾನದ ಒಳಗಾಗಲೀ ಅಥವಾ ಹೊರಗಾಗಲೀ ಯಾವದೇ ಭೂತ-ಪ್ರೇತಗಳಿಲ್ಲ ಎಂದು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.