*ಗೋಣಿಕೊಪ್ಪಲು, ಜೂ. 26: ಪೆÇನ್ನಂಪೇಟೆ ಅರಣ್ಯ ವಿದ್ಯಾಲಯವನ್ನು ಖಾಸಗೀಕರಣ ಮಾಡುವದನ್ನು ವಿರೋಧಿಸಿ ಕಾಲೇಜಿನ ವಿದ್ಯಾರ್ಥಿಗಳು ಪೆÇನ್ನಂಪೇಟೆ ಬಸ್ಸ್ ನಿಲ್ದಾಣದಲ್ಲಿ ಘೋಷಣೆಗಳನ್ನು ಹಾಕುತ್ತ ಪ್ರತಿಭಟನೆ ನಡೆಸಿದರು.

ಎರಡನೇ ದಿನಕ್ಕೆ ಪ್ರತಿಭಟನೆಯ ಕಾವು ಧಿಕ್ಕಾರ ಕೂಗುವ ಮೂಲಕ ತೀವ್ರತೆ ಪಡೆದುಕೊಂಡಿತು. ಕಾಲೇಜು ಆವರಣದಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕಾಲೇಜನ್ನು ಖಾಸಗೀಕರಣ ಗೊಳಿಸಬಾರದು ಎಂದು ಒತ್ತಾಯಿಸಿದರು. ಕಾಲೇಜನ್ನು ಖಾಸಗೀಕರಣಗೊಳಿಸುವದರಿಂದ ಉದ್ಯೋಗ ಸಮಸ್ಯೆ ಉಂಟಾಗುತ್ತದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಖಾಸಗೀಕರಣಗೊಳಿಸುವ ಶಡ್ಯಂತರ ನಡೆಸಿದ ಬಲಿಷ್ಠರ ವಿರುದ್ಧ ಧಿಕ್ಕಾರ ಹಾಕುತ್ತ ಪ್ರತಿಭಟನೆಯ ಮೂಲಕ ಅಸಮಾಧಾನವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು.