ಮಡಿಕೇರಿ, ಜೂ. 26: 2016-17ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (6-8) ಸಂಬಂಧ 1;2 ಅನುಪಾತದಲ್ಲಿ ನೇಮಕವಾದ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆಗೆ ಜುಲೈ 3 ಮತ್ತು 4 ರಂದು ಉಪನಿರ್ದೇಶಕರ ಕಚೇರಿಗೆ ಹಾಜರಾಗಲು ಸೂಚಿಸಿದ್ದು, ಕಾರಾಣಾಂತರಗಳಿಂದ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.