ಗೋಣಿಕೊಪ್ಪ ವರದಿ, ಜೂ. 27: ಶ್ರೀ ಅಮ್ಮ ಭಗವಾನ್ ಕಲ್ಯಾಣೋತ್ಸವವು ಕೊಡಗಿನ ಕೈಕೇರಿ ಗ್ರಾಮದ ಶ್ರೀ ಅಮ್ಮ ಭಗವಾನ್ ದೇವಾಲಯದಲ್ಲಿ ನಡೆಯಿತು. ಅಮ್ಮ ಭಗವಾನ್ ಭಕ್ತ ಶ್ರೀ ಕಂಠ ಅವರ ನೇತೃತ್ವದಲ್ಲಿ ಗಣಪತಿ ಪೂಜೆ, ಕಳಸ ಪೂಜೆ, ಬ್ರಹ್ಮ ಉಪದೇಶ, ಕಂಕಣ ಪೂಜೆ ಸೇರಿದಂತೆ ಹತ್ತು ಹಲವು ಪೂಜೆಗಳನ್ನು ಮಾಡ ಲಾಯಿತು. ಕೊಡಗಿನ ಸಮಸ್ತ ಜನತೆಯ ಕಲ್ಯಾಣಕ್ಕಾಗಿ, ಮಳೆಬೆಳೆ, ಎಲ್ಲಾ ಬಾಂಧವ್ಯ ಗಳಲ್ಲಿ ಪ್ರೀತಿ ಪ್ರೇಮ ಮೂಡಲಿ ಕೊಡಗು ಸುಭಿಕ್ಷೆಯಾಗಲಿ ಎಂದು ಈ ಕಲ್ಯಾಣೋತ್ಸವ ವನ್ನು ಆಚರಿಸಲಾಗುತ್ತಿದೆ ಎಂದು ಅಮ್ಮ ಭಕ್ತ ಮೂಡಗದ್ದೆ ರಾಮಕೃಷ್ಣ ಹೇಳಿದರು.

ಭಕ್ತೆ ಮನೆಯಪಂಡ ತಾರಾ ಕಿರಣ್ ಮಾತನಾಡಿ, ಅಮ್ಮ ಭಗವಾನರು ದೇಶದ ಏಳಿಗೆಗಾಗಿ ಜನರ ಕಷ್ಟಗಳನ್ನು ದೂರಮಾಡ ಲೆಂದು ಕಲ್ಕಿ ರೂಪ ತಾಳಿದ್ದಾರೆ. ಕೊಡಗಿನ ಹಲವು ಜನರಿಗೆ ಒಳಿತಾಗಿದೆ ಎಂದರು. ಕಲ್ಯಾಣೋತ್ಸವದಲ್ಲಿ ಭಕ್ತಾದಿಗಳಾದ ನವೀನ್, ಉಷಾಲತಾ ಡಾಲು ಜೀ, ಲತಾ ಪೂಣಚ್ಚ, ರಾಣಿ ಸುಬ್ರಮಣಿ, ರಿಮಿತ ಪೂಣಚ್ಚ, ಮಾಚಯ್ಯ ಮತ್ತು ರೋಹಿಣಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.