ಮಡಿಕೇರಿ, ಜೂ. 27: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರ ಉಪಸ್ಥಿತಿಯಲ್ಲಿ ಬುಧವಾರ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಸಮಿತಿ ಸಭೆ ನಡೆಯಿತು.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಿ.ಕೆ. ಬೋಪಣ್ಣ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸರೋಜಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು.

ಜಿ.ಪಂ. ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ವಿವರ ಇಂತಿದೆ: ಹಣಕಾಸು ಲೆಕ್ಕ ಪರಿಶೋಧನಾ ಮತ್ತು ಯೋಜನಾ ಸ್ಥಾಯಿ ಸಮಿತಿಯಲ್ಲಿ ಜಿ.ಪಂ.ಅಧ್ಯಕ್ಷ ಬಿ.ಎ. ಹರೀಶ್ (ಅಧ್ಯಕ್ಷರು), ಸದಸ್ಯರಾಗಿ ಕೆ.ಕೆ.ಕುಮಾರ್, ಕವಿತ ಪ್ರಭಾಕರ್, ಬಿ.ಜೆ. ದೀಪಕ್, ಅಪ್ಪಂಡೇರಂಡ ಭವ್ಯ, ಪಿ.ಆರ್.ಪಂಕಜ, ಎಂ.ಬಿ. ಮಾದಪ್ಪ, ಸಾಮಾನ್ಯ ಸ್ಥಾಯಿ ಸಮಿತಿಗೆ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ (ಅಧ್ಯಕ್ಷರು), ಸದಸ್ಯರಾಗಿ ಶ್ರೀನಿವಾಸ್, ಅಚ್ಚಪಂಡ ಮಹೇಶ್ ಗಣಪತಿ, ಯಾಲದಾಳು ಪದ್ಮಾವತಿ, ಎ.ಬಿ.ಸುನಿತಾ, ಬಾನಂಡ ಎನ್.ಪ್ರಥ್ಯು, ಸಿ.ಪಿ. ಪುಟ್ಟರಾಜು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯಲ್ಲಿ ಸಿ.ಕೆ. ಬೋಪಣ್ಣ (ಅಧ್ಯಕ್ಷರು), ಸದಸ್ಯರಾಗಿ ಮೂಕೊಂಡ ವಿಜು ಸುಬ್ರಮಣಿ, ಕವಿತಾ ಪ್ರಭಾಕರ್, ಕುಮಾರಿ ಕೆ.ಆರ್. ಮಂಜುಳ, ಕೆ.ಕೆ. ಕುಮಾರ, ಶ್ರೀಜ ಸಾಜಿ, ಕುಮುದ ಧರ್ಮಪ್ಪ.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯಲ್ಲಿ ನೆಲ್ಲಚಂಡ ಕಿರಣ್ ಕಾರ್ಯಪ್ಪ (ಅಧ್ಯಕ್ಷರು), ಸದಸ್ಯರಾಗಿ ಮೂಕೊಂಡ ಎಂ. ಶಶಿಸುಬ್ರಮಣಿ, ಮುರುಳಿ ಕರುಂಬಮ್ಮಯ್ಯ, ಪೂರ್ಣಿಮಾ ಗೋಪಾಲ್, ಕೆ.ಆರ್.ಮಂಜುಳ, ಲೀಲಾವತಿ, ಕೆ.ಪಿ.ಸರಿತಾ ಪೂಣಚ್ಚ.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸರೋಜಮ್ಮ, ಸದಸ್ಯರಾಗಿ ಅಚ್ಚಪಂಡ ಮಹೇಶ್ ಗಣಪತಿ, ಬಿ.ಜೆ. ದೀಪಕ್, ಪೂರ್ಣಿಮ ಗೋಪಾಲ್, ಬಿ.ಪಿ. ಕಲಾವತಿ, ಕೆ.ಪಿ. ಚಂದ್ರಕಲಾ, ಲತೀಫ್ ನೇಮಕಗೊಂಡಿದ್ದಾರೆ.