ಪೊನ್ನಂಪೇಟೆ, ಜೂ. 28: ಕಳೆದ ಮಹಾಮಳೆಗೆ ತತ್ತರಿಸಿ ತೀವ್ರವಾಗಿ ಹಾನಿಗೊಂಡು ವಾಹನ ಸಂಚಾರ ಸ್ಥಗಿತಗೊಂಡಿರುವ ವೀರಾಜಪೇಟೆ- ಮಾಕುಟ್ಟ ಹೆದ್ದಾರಿಯ ದುರಸ್ತಿ ಕಾಮಗಾರಿಯನ್ನು ವೀರಾಜಪೇಟೆ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಬುಧವಾರದಂದು ಭೇಟಿ ನೀಡಿ ಪರಿಶೀಲಿಸಿದರು. ಬೋಪಯ್ಯ ಅವರೊಂದಿಗೆ ಕೊಡಗು -ಕೇರಳ ಗಡಿ ಪ್ರದೇಶವಾದ ಪೇರಾವೂರ್ ಕ್ಷೇತ್ರದ ಶಾಸಕ ಸನ್ನಿ ಜೋಸೆಪ್ ಅವರು ಪಾಲ್ಗೊಂಡಿದ್ದರು.ಮಳೆಯಿಂದಾಗಿ ನೀರು ವ್ಯಾಪಕವಾಗಿ ಹರಿದ ಪರಿಣಾಮ ವೀರಾಜಪೇಟೆ- ಮಾಕುಟ್ಟ ಹೆದ್ದಾರಿಯ ಹಲವೆಡೆ ರಸ್ತೆಗೆ ತೀವ್ರ ಹಾನಿ ಸಂಭವಿಸಿತ್ತು. ಹಾನಿಗೊಂಡ ಪೊನ್ನಂಪೇಟೆ, ಜೂ. 28: ಕಳೆದ ಮಹಾಮಳೆಗೆ ತತ್ತರಿಸಿ ತೀವ್ರವಾಗಿ ಹಾನಿಗೊಂಡು ವಾಹನ ಸಂಚಾರ ಸ್ಥಗಿತಗೊಂಡಿರುವ ವೀರಾಜಪೇಟೆ- ಮಾಕುಟ್ಟ ಹೆದ್ದಾರಿಯ ದುರಸ್ತಿ ಕಾಮಗಾರಿಯನ್ನು ವೀರಾಜಪೇಟೆ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಬುಧವಾರದಂದು ಭೇಟಿ ನೀಡಿ ಪರಿಶೀಲಿಸಿದರು. ಬೋಪಯ್ಯ ಅವರೊಂದಿಗೆ ಕೊಡಗು -ಕೇರಳ ಗಡಿ ಪ್ರದೇಶವಾದ ಪೇರಾವೂರ್ ಕ್ಷೇತ್ರದ ಶಾಸಕ ಸನ್ನಿ ಜೋಸೆಪ್ ಅವರು ಪಾಲ್ಗೊಂಡಿದ್ದರು.

ಮಳೆಯಿಂದಾಗಿ ನೀರು ವ್ಯಾಪಕವಾಗಿ ಹರಿದ ಪರಿಣಾಮ ವೀರಾಜಪೇಟೆ- ಮಾಕುಟ್ಟ ಹೆದ್ದಾರಿಯ ಹಲವೆಡೆ ರಸ್ತೆಗೆ ತೀವ್ರ ಹಾನಿ ಸಂಭವಿಸಿತ್ತು. ಹಾನಿಗೊಂಡ ವೀರಾಜಪೇಟೆ- ಮಾಕುಟ್ಟ ಹೆದ್ದಾರಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವದರಿಂದ ಸಂಪರ್ಕ ಕೊರತೆಯಿಂದಾಗಿ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ. ಅದ್ದರಿಂದ ಏನೇ ತೊಡಕುಗಳಿದ್ದರೂ ಈ ಕಾಮಗಾರಿಗೆ

(ಮೊದಲ ಪುಟದಿಂದ) ಮೊದಲ ಆದ್ಯತೆ ನೀಡಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸಬೇಕು ಎಂದು ಬೋಪಯ್ಯ ಅವರು ಹೇಳಿದರು.

ಮೊದಲು ಲಘು ವಾಹನಗಳಿಗೆ ಸಂಚರಿಸಲು ಅವಕಾಶವಾಗುವಂತೆ ನೋಡಿಕೊಳ್ಳಬೇಕು. ಬಳಿಕ ಕಾಮಗಾರಿ ವೇಗವನ್ನು ಮತ್ತಷ್ಟು ಹೆಚ್ಚಿಸಿ ಭಾರಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯಕುಮಾರ್ ಅವರಿಗೆ ಸೂಚಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಮುಂದಿನ ವಾರದೊಳಗಾಗಿ ವೀರಾಜಪೇಟೆ- ಮಾಕುಟ್ಟ ಹೆದ್ದಾರಿಯಲ್ಲಿ ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. ಅಲ್ಲದೆ ಮಳೆಗೆ ಬಿದ್ದ ಮರಗಳನ್ನು ಕೂಡಲೇ ತೆರವುಗೊಳಿಸಬೇಕು. ರಸ್ತೆ ಭಾಗಕ್ಕೆ ವಾಲಿ ಬೀಳುವ ಸಂಭವವಿರುವ ಮರಗಳನ್ನು ತೆರವುಗೊಳಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಇಲ್ಲ ಸಲ್ಲದ ನೆಪಗಳನ್ನು ಹೇಳಿ ಕಾಮಗಾರಿ ವಿಳಂಬಕ್ಕೆ ಕಾರಣರಾಗಬಾರದು ಎಂದು ಕೆ.ಜಿ. ಬೋಪಯ್ಯ ಅವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವಿನಯ ಕುಮಾರ್ ಅವರು, ದುರಸ್ಥಿ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದೆ. ಇದಕ್ಕಾಗಿ ಇಲಾಖೆ ಸಾಕಷ್ಟು ಶ್ರಮವಹಿಸುತ್ತಿದೆ. ಆದರೆ ಈ ಭಾಗದಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆ ಕಾಮಗಾರಿಗೆ ಅಡ್ಡಿಯಾಗುತ್ತಿದೆ ಎಂದು ವಿವರಿಸಿದರು. ಸ್ಥಳದಲ್ಲಿದ್ದ ಪೇರಾವೂರ್ ಕ್ಷೇತ್ರದ ಶಾಸಕ ಸನ್ನಿ ಜೋಸೆಪ್ ಅವರು ಮಾತನಾಡಿ, ಈ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿರುವದರಿಂದ ಉಭಯ ರಾಜ್ಯಗಳ ಆರ್ಥಿಕ ಸ್ಥಿತಿಗತಿಯ ಮೇಲೆ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯನ್ನು ನೀಗಿಸುವ ಹೊಣೆಗಾರಿಕೆ ಕರ್ನಾಟಕ ಸರಕಾರದ ಮೇಲಿದೆ. ಅದ್ದರಿಂದ ರಾಜ್ಯ ಸರಕಾರದ ಮೇಲೆ ನಿರಂತರ ಒತ್ತಡ ತಂದು ಕಾಮಗಾರಿಗೆ ಅಗತ್ಯವಿರುವ ಅನುದಾನವನ್ನು ಸಕಾಲದಲ್ಲಿ ಬಿಡುಗಡೆಗೊಳಿಸಲು ನೆರವಾಗಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಅವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೇರಳ ಗಡಿಯ ಅಯ್ಯಕುನ್ನು ಗ್ರಾ. ಪಂ. ಅಧ್ಯಕ್ಷೆ ಶೈಲಜಾ ಜೋಸೆಫ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್, ಮಾಕುಟ್ಟ ವಲಯ ಅರಣ್ಯಾಧಿಕಾರಿ ಪ್ರಸನ್ನ, ವೀರಾಜಪೇಟೆ ಪ.ಪಂ. ಉಪಾಧ್ಯಕ್ಷೆ ತಸ್ಲೀಮಾ ಅಕ್ತರ್, ಸದಸ್ಯೆ ಸುನಿತಾ, ವೀರಾಜಪೇಟೆಯ ಕೊಡಗು ಜಿಲ್ಲಾ ಮಾರ್ಕೆಟಿಂಗ್ ಫೆಡರೇಷನ್ ನಿಗಮದ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ಬೇಟೋಳಿ ಗ್ರಾ. ಪಂ. ಅಧ್ಯಕ್ಷೆ ಭೂಮಿಕ ಚೋಂದಮ್ಮ, ಉಪಾಧ್ಯಕ್ಷ ಅಮ್ಮಣಕುಟ್ಟಂಡ ಸುರೇನ್ ಕಟ್ಟಿ, ಬಿ.ಜೆ.ಪಿ. ಪ್ರಮುಖರಾದ ಜೋಕಿಂ ರಾಡ್ರಿಗಸ್, ನಾಗರಾಜ್ ಮೊದಲಾದವರಿದ್ದರು.

-ಚಿತ್ರ ವರದಿ : ರಫೀಕ್ ತೂಚಮಕೇರಿ