ವೀರಾಜಪೇಟೆ, ಜೂ. 28: ಗೋಣಿಕೊಪ್ಪಲಿನಲ್ಲಿ ಅಮ್ಮ ಭಗವಾನ್ ಅವರ ಕಲ್ಯಾಣೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಅಮ್ಮ ಭಗವಾನ್ ಕಲ್ಯಾಣೋತ್ಸವದ ಪ್ರಯುಕ್ತ ಬೆಳಿಗ್ಗೆ ಗಣಪತಿ ಪೂಜೆ, ಕಲಶ ಪೂಜೆ, ಭಜನೆ, ಸಾಮೂಹಿಕ ಪ್ರಾರ್ಥನೆ ನಂತರ ಅಪರಾಹ್ನ 12 ಗಂಟೆಗೆ ಮೈಸೂರಿನ ಶ್ರೀಕಂಠ ಪುರೋಹಿತರು ಕಲ್ಯಾಣೋತ್ಸವವನ್ನು ಪೂಜೆ ಪುನಸ್ಕಾರಗಳೊಂದಿಗೆ ಸಾಂಪ್ರದಾಯಿಕವಾಗಿ ನೆರವೇರಿತು.

ಗೋಣಿಕೊಪ್ಪಲಿನ ಅಮ್ಮ ಭಗವಾನ್ ಪ್ರಾರ್ಥನಾ ಮಂದಿರದಲ್ಲಿ ಆಯೋಜಿಸಿದ್ದ ಕಲ್ಯಾಣೋತ್ಸವದಲ್ಲಿ ಅಮ್ಮ ಭಗವಾನ್ ಅವರ ಭಕ್ತರಾದ ಡಾಲುಜೀ, ತಾರಾಕಿರಣ್‍ಜೀ, ಮಂದಪ್ಪಜೀ, ರಾಣೀಜಿ, ನವೀನ್‍ಜೀ, ಮಾಚಯ್ಯಜೀ, ವಸಂತ್‍ಜೀ, ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.

ತಾ. 9 ರಿಂದ ಜುಲೈ 8 ರವರೆಗೆ ವಿಶ್ವದ 165 ರಾಷ್ಟ್ರಗಳಲ್ಲಿ ಅಮ್ಮ ಭಗವಾನ್‍ರ ಕಲ್ಯಾಣೋತ್ಸವ ಆಚರಿಸಲ್ಪಡುತ್ತಿದೆ ಎಂದು ಭಕ್ತವೃಂದ ತಿಳಿಸಿದೆ.