ಕೂಡಿಗೆ, ಜೂ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಗುಮ್ಮನಕೊಲ್ಲಿ ಕಾರ್ಯಕ್ಷೇತ್ರದಲ್ಲಿ ಕಮಲ ಜಂಟಿ ಬಾಧ್ಯತಾ ಸಂಘವನ್ನು ಕೂಡಿಗೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಉದ್ಘಾಟಿಸಿದರು.

ನಂತರ ಮಾಹಿತಿ ನೀಡಿದ ಮೇಲ್ವಿಚಾರಕರು ಸಂಘವನ್ನು ಪ್ರಾರಂಭಿಸುವದು ಸದಸ್ಯರ ಸರ್ವತೋಮುಖ ಅಭಿವೃದ್ಧಿಗೊಸ್ಕರ ವಾಗಿರುತ್ತದೆ. ಸದಸ್ಯರೆಲ್ಲರೂ ಒಮ್ಮತದಿಂದ ಸೇರಿಕೊಂಡಿರುವ ಸಂಘದಲ್ಲಿ ಸದಸ್ಯರ ಬೇಡಿಕೆಗನುಗುಣವಾಗಿ ವಾರ್ಷಿಕ ಯೋಜನೆಯನ್ನು ತಯಾರಿಸಿಕೊಳ್ಳುವದು ಪ್ರಾಮುಖ್ಯವಾಗಿರುತ್ತದೆ. ಸದಸ್ಯರೆಲ್ಲರೂ ಚರ್ಚಿಸಿ ಸ್ವ ಉದ್ಶೋಗಕ್ಕೆ ಪೂರಕ ಚಟುವಟಿಕೆಗಳನ್ನು ಮಾಡುವಲ್ಲಿ ರಚಿಸಿಕೊಂಡಿರುವ ಕಮಲ ಜಂಟಿಬಾದ್ಯತಾ ಸಂಘದಿಂದ ಆರ್ಥಿಕ ನೆರವನ್ನು ಕಾವೇರಿ ಗ್ರಾಮೀಣ ಬ್ಶಾಂಕಿನ ಸಹಬಾಗಿತ್ವದೊಂದಿಗೆ ಪಡೆದುಕೊಂಡು ಕುಟುಂಬದಲ್ಲಿ ಅಭಿವೃದ್ಧಿ ಹೊಂದುವದು ಹಾಗೂ ಪ್ರತಿವಾರ ನಿಗದಿತ ಸಮಯಕ್ಕೆ ನಿಗದಿತ ಸ್ಥಳದಲ್ಲಿ ನಿಗದಿತ ವಾರದಂದು ಸದಸ್ಯರೆಲ್ಲರೂ ಸಭೆ ಸೇರಿ ಉಳಿತಾಯ ಮಾಡುವದರ ಮೂಲಕ ನಿರ್ಣಯದಾಖಲಿಸಿ ಕೊಳ್ಳುವದು ಹಾಗೂ ವಾರಕೊಬ್ಬರಂತೆ ಸಂಗ್ರಹಿಸಿದ ಮೊತ್ತವನ್ನು ಕ್ರಮವತ್ತಾಗಿ ಸಂಗ್ರಹಣಾ ಕೇಂದ್ರಕ್ಕೆ ಜಮೆಗೊಳಿಸುವ ಶಿಸ್ತನ್ನು ಸಂಘದಲ್ಲಿ ರೂಢಿಸಿಕೊಂಡು ಅಭಿವೃದ್ಧಿ ಹೊಂದುವಂತೆ ಮಾಹಿತಿ ನೀಡಿದರು.

ಕಮಲ ಸಂಘದ ಪ್ರಬಂಧಕರಾಗಿ ರಾಣಿ ಭಾಗ್ಯರಾಜ್, ಸಂಯೋಜಕರಾಗಿ ಶಾಂತಿ ಮುರಳಿಕೃಷ್ಣ, ಕೋಶಾಧಿಕಾರಿಯಾಗಿ ಶೋಭಾ ಮಹೇಶ್ ಅವರನ್ನು ಆಯ್ಕೆ ಮಾಡಲಾಯಿತು.

ಸೇವಾಪ್ರತಿನಿಧಿ ಸುವರ್ಣ ಅವರು ಸಂಘದ ಪ್ರತಿನಿಧಿಗಳಿಗೆ ನಿರ್ಣಯ ಪುಸ್ತಕವನ್ನು ವಿತರಿಸಿ, ದಾಖಲಾತಿ ನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದರು. ಸದಸ್ಶರಾದ ಫರಿದಾಬಾನು ಹಾಗೂ ಕೌಶಲ್ಯ ಉಪಸ್ಥಿತರಿದ್ದರು. ಶಾಂತಿ ಮುರಳಿಕೃಷ್ಣ ಕಾರ್ಯಕ್ರಮ ನಿರೂಪಿಸಿದರು.