ನಾಪೆÇೀಕ್ಲು, ಜೂ. 27: ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳ ಒತ್ತಡ ದಲ್ಲಿದ್ದರೂ, ಬಿಡುವಿನ ಅವಧಿಯಲ್ಲಿ ಮನೋಲ್ಲಾಸ ನೀಡುವಂತಹ ಹಾಗೂ ಸಾಮಾನ್ಯ ಜ್ಞಾನ ವೃದ್ಧಿಸುವ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಾಪೆÇೀಕ್ಲು ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ಮುಕ್ಕಾಟಿರ ವಿನಯ್ ಅಭಿಪ್ರಾಯಪಟ್ಟರು.

ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಾಪೆÇೀಕ್ಲು ಹೋಬಳಿ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಶಿಕ್ಷಕರ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಹೋಬಳಿ ಘಟಕದ ಅಧ್ಯಕ್ಷ ಸಿ.ಎಸ್. ಸುರೇಶ್ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ರಾಮಟ್ರಸ್ಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬೊಪ್ಪಂಡ ಜಾಲಿ ಬೋಪಯ್ಯ, ಹಿರಿಯ ಸದಸ್ಯ ಬೊಪ್ಪೇರ ಕಾವೇರಪ್ಪ, ಕುಡಿಯರ ಮುತ್ತಪ್ಪ, ಮನ್ಸೂರ್ ಆಲಿ ಮತ್ತಿತರರು ಇದ್ದರು. ಕಸಾಪ ಸದಸ್ಯೆ ಶಿಕ್ಷಕಿ ಸುಬ್ಬಮ್ಮ ಪ್ರಾಸ್ತಾವಿಕ ನುಡಿಯಾಡಿ ದರು.

ಹೊದವಾಡ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಪರ್ಣ ಉಪಾಧ್ಯಾಯ ಪ್ರಾರ್ಥನೆ, ಕಸಾಪ ಸದಸ್ಯೆ ಉಷಾರಾಣಿ ಸ್ವಾಗತ, ಮಣವಟ್ಟೀರ ದಯ ಚಿಣ್ಣಪ್ಪ ನಿರೂಪಣೆ, ಕಾರ್ಯದರ್ಶಿ ಎನ್.ಕೆ. ಪ್ರಭು ವಂದಿಸಿದರು.

ವಿಜೇತರು: ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಧಾಕೃಷ್ಣ ಮತ್ತು ಶ್ರೀಶೈಲ ಎನ್.ದೇಸಾಯಿ ತಂಡ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಸುಕುಮಾರ್ ಮತ್ತು ವಂಜಮ್ಮ ತಂಡ ಪಡೆದರು. ತೃತೀಯ ಬಹುಮಾನ ವನ್ನು ನೇತಾಜಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಸಿ.ಕೆ.ಕಾವೇರಿ ಹಾಗೂ ನಿಲನ್ ತಂಡ ಪಡೆದರೆ, ನಾಲ್ಕನೇ ಬಹುಮಾನವನ್ನು ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯ ಕೆ.ಡಿ. ಶೋಭಿತ ಹಾಗೂ ಕಾಳಯ್ಯ ತಂಡ ಪಡೆದರು. ವೀಕ್ಷಕರ ಪ್ರಶ್ನೆ ವಿಭಾಗದಲ್ಲಿ ರಮ್ಯ ಕೆ.ಜಿ, ಅಪರ್ಣ ಎಂ.ಎಸ್. ಹಾಗೂ ಸೋಮಶೇಖರ್ ಪ್ರಶಸ್ತಿ ಪಡೆದರು.