ಕೂಡಿಗೆ, ಜೂ. 28: ಕೂಡಿಗೆ ವಲಯದ ರೈತರಿಗೆ ರೈತ ಕ್ಷೇತ್ರ ಪಾಠಶಾಲೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ವಲಯದಲ್ಲಿ ಪಗತಿಬಂದು ಸಂಘಗಳ ರೈತ ಕುಟುಂಬಕ್ಕೆ ಸರಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಬಾಗಿತ್ವದೊಂದಿಗೆ ರೈತಪರ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದ್ದು ಅರ್ಹ ಫಲಾನುಭವಿಗಳು ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಬಹುದು ಎಂದರು.

ಯೋಜನೆಯಿಂದ ಸಿಗುವಂತಹ ಅನುದಾನಗಳನ್ನು ಬಳಕೆ ಮಾಡಿ ಕೊಳ್ಳುವ ಫಲಾನುಭವಿಗಳು ಹೊಸ ಕೃಷಿಯ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿ ಯಾಂತ್ರೀಕೃತವಾಗಿ ಕೃಷಿಯನ್ನು ಅನುಷ್ಠಾನ ಮಾಡುವಂತೆ ಸಲಹೆ ನೀಡಿದರು. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸರಕಾರಿ ಸೌಲಭ್ಯ, ಕೃಷಿ ಯಂತ್ರಗಳ ಬಾಡಿಗೆ ಆದಾರಿತ ಸೇವಾ ಕೇಂದ್ರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ಕಾರ್ಯಾಗಾರವನ್ನು ಕೂಡಿಗೆ ಗ್ರಾಮ ಪಂಚಾಯಿತಿ ಸಭಾಭವನ ಹಾಗೂ ಮುಳ್ಳುಸೋಗೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಸಲಾಯಿತು

ಕೂಡಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಧರ್ಮಸ್ಥಳ ಯೋಜನೆಯ ಸದಸ್ಯರಿಗೆ ಸಿಗುವಷ್ಟು ಮಾಹಿತಿಗಳು ಇತರ ಯಾವದೇ ಸಂಘಟನೆಯಲ್ಲಿ ದೊರೆಯಲು ಸಾಧ್ಯವಿಲ್ಲ.

ಪ್ರತಿಯೊಬ್ಬ ಪ್ರಜೆಗೂ ಸರಕಾರದ ಸೌಲಭ್ಯಗಳನ್ನು ಅರ್ಹತೆಗೆ ಅನುಗುಣವಾಗಿ ಪಡೆದು ಕೊಳ್ಳಲು ಗ್ರಾಮ ಪಂಚಾಯಿತಿಯ ಸಂಪೂರ್ಣ ಸಹಕಾರವಿದ್ದು, ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಕೃಷಿ ಅಧಿಕಾರಿ ಕಾವ್ಯ ಇಲಾಖೆಯಿಂದ ರೈತರಿಗೆ ಸಿಗುವಂತಹ ಸೌಲಭ್ಯ, ಸಹಾಯಧನಗಳು ಹಾಗೂ ಪಡೆದುಕೊಳ್ಳಲು ರೈತರಿಗೆ ಇರಬೇಕಾದ ದಾಖಲಾತಿಗಳ ಕುರಿತು ಮಾಹಿತಿ ನೀಡಿದರು. ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಗ್ರಾಮ ಪಂಚಾಯಿತಿ ಯಿಂದ ಫಲಾನುಭವಿಗಳಿಗೆ ದೊರಕುವ ಸಹಾಯಧನದ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಸೌಲಭ್ಯ ಪಡೆದುಕೊಳ್ಳುವ ವಿಧಾನಗಳ ಕುರಿತು ಸಂಪರ್ಕಿಸುವಂತೆ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕರ್ನಾಟಕ ಸರಕಾರದ ಜಂಟಿ ಸಹಭಾಗಿತ್ವದೊಂದಿಗೆ ಕೃಷಿ ಯಂತ್ರಗಳ ಬಾಡಿಗೆ ಸೇವಾ ಕೇಂದ್ರ ಕೃಷಿಯಂತ್ರಧಾರೆಯ ವ್ಯವಸ್ಥಾಪಕ ಸದಾಶಿವ ಕೃಷಿ ಕೆಲಸಕ್ಕೆ ರೈತರಿಗೆ ಕಡಿಮೆ ಬಾಡಿಗೆಯಲ್ಲಿ ಕೃಷಿ ಯಂತ್ರಗಳನ್ನು ನೀಡುತ್ತಿದ್ದು, ರೈತರಿಗೆ ಬಾಡಿಗೆ ಆದಾರಿತವಾಗಿ ದೊರೆಯುವ ಯಂತ್ರಗಳು ಹಾಗೂ ನಿಗದಿಗೊಳಿಸಿರುವ ಬಾಡಿಗೆ ಮೊತ್ತದ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ಕೃಷಿ ಮೇಲ್ವೀಚಾರಕಿ ಗೀತಾ ಯೋಜನೆಯಿಂದ ಪ್ರಸ್ತುತ ವರ್ಷದಲ್ಲಿ ನೀಡಲ್ಪಡುವ ಅನುದಾನ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಕೂಡಿಗೆ ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು. ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಮಂಜಪ್ಪ, ಒಕ್ಕೂಟದ ಅಧ್ಯಕ್ಷರುಗಳಾದ ನಾಗೇಶ್ ಮತ್ತು ಜಯಮ್ಮ ಕೂಡಿಗೆ ವಲಯದ ಸೇವಾ ಪ್ರತಿನಿಧಿಗಳಾದ ಸುನಂದ, ರೇಣುಕಾ, ಸುನಿತಾ, ಸುಧಾ, ರಾಧ, ಸುವರ್ಣ, ಶಶಿಕಲಾ ಮತ್ತು ಪ್ರಗತಿಬಂಧು ಜಂಟಿ ಬಾದ್ಯತಾ ಸಂಘಗಳ ಸದಸ್ಯರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.