ಮಡಿಕೇರಿ, ಜೂ. 29: ಇಲಾಖೆಯ ನಡಿಗೆ ರೈತರ ಬಾಗಿಲಿಗೆ” ಎಂಬ ಶಿರೋನಾಮೆಯಡಿ ಕೃಷಿ ಇಲಾಖೆಯ ವತಿಯಿಂದ ತಾ. 27 ರಂದು ಮರಗೋಡು ಶಾಲಾ ಆವರಣದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿದ್ರುಪಣೆ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೃಷಿ ಅಭಿಯಾನ- 2018 ಕಾರ್ಯಕ್ರಮಕ್ಕೆ ತಾಲೂಕು ಪಂಚಾಯ್ತಿ ಸದಸ್ಯ ಬಿ.ವೈ. ರವೀಂದ್ರ ದೀಪ ಬೆಳಗುವದರ ಮೂಲಕ ಚಾಲನೆ ನೀಡಿದರು. ರೈತಾಪಿ ವರ್ಗ ಇಲಾಖೆಗಳೊಂದಿಗೆ ಸಮನ್ವಯ ಬೆಳೆಸಿಕೊಂಡು ಬೆಳೆ ಅಭಿವೃದ್ಧಿ ಮತ್ತು ಹಣಕಾಸಿಕ ಸ್ಥಿತಿ ಅಭಿವೃದ್ಧಿ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಅರಣ್ಯ ಇಲಾಖೆ ಮತ್ತು ವಿವಿಧ ಸಂಸ್ಥೆಯವರ ಕೃಷಿ ಪರಿಕರಗಳು ಮತ್ತು ಯಂತ್ರೋಪಕರಣಗಳ ವಸ್ತುಪ್ರದರ್ಶನ ಮಳಿಗೆಗಳನ್ನು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ|| ಶಿವಕುಮಾರ್ ಉದ್ಘಾಟಿಸಿದರು.

ರೈತರು ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತಜ್ಞ ವೀರೇಂದ್ರ ಕುಮಾರ್ ಮಣ್ಣು ಪರೀಕೆ,್ಷ ಬೀಜೋಪಚಾರ, ಕಾಳು ಮೆಣಸಿನ ಬೇಸಾಯದ ಬಗ್ಗೆ ಮಾಹಿತಿ ನೀಡಿದರೆ, ಡಾ|| ಸೋಮಶೇಖರ್ ವಿವಿಧ ಬೆಳೆಗಳ ಗುಣಮಟ್ಟದ ಬೀಜೋತ್ಪಾದನೆ ಬಗ್ಗೆ ಮಾಹಿತಿ ನೀಡಿದರು. ಚೆಟ್ಟಳ್ಳಿ ತೋಟಗಾರಿಕೆ ಬೆಳೆಗಳ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ|| ವೆಂಕಟರಮಣ ಪ್ರಸ್ತುತ ಕಾಲಮಾನದಲ್ಲಿ “ಆರೋಗ್ಯ ವೃದ್ಧಿಯಲ್ಲಿ ಹಣ್ಣುಗಳ ಪಾತ್ರ” ವಿಷಯದ ಕುರಿತು ವಿಚಾರ ಮಂಡನೆ ಮಾಡಿದರೆ, ಮಡಿಕೇರಿ ಕೃಷಿ ಸಂಶೋಧನಾ ಕೇಂದ್ರದ ತಜ್ಞ ತುಕಾರಾಂ “ಮಣ್ಣಿನ ಅಭಿವೃದ್ಧಿಗೆ ಎರೆಗೊಬ್ಬರ ಬಳಕೆ” ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಾ, ರೈತರು ಮತ್ತು ವಿಜ್ಞಾನಿಗಳು ಕೆಲಕಾಲ ಸಂವಾದದಲ್ಲಿ ಭಾಗವಹಿಸಿ ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

ಇಲಾಖೆ ವತಿಯಿಂದ ಫಲಾನುಭವಿ ಸಿ.ಕೆ. ವಿಜಯಕುಮಾರ್, ಕೋಕೇರಿ, ಇವರಿಗೆ ರಿಯಾಯಿತಿ ದರದ ಪವರ್‍ಟಿಲ್ಲರ್ ವಿತರಣೆ ಮಾಡಲಾಯಿತು. ಇಲಾಖೆಯ ತಾಂತ್ರಿಕ ಅಧಿಕಾರಿ ಎ.ಸಿ. ಗಿರೀಶ್ ಸ್ವಾಗತಿಸಿ, ಸಹಾಯಕ ಕೃಷಿ ನಿರ್ದೇಶಕ ಡಾ. ಮಂಜುನಾಥ್ ವಂದಿಸಿದರು. ಮುಂಗಾರು ಮಳೆಯ ಮಧೆÉ್ಯಯೂ 270ಕ್ಕೂ ಹೆಚ್ಚು ಸ್ಥಳೀಯ ರೈತರು ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಲಾಭ ಪಡೆದುಕೊಂಡರು.