ಗೋಣಿಕೊಪ್ಪಲು: ಇತ್ತೀಚೆಗೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೊದಲಿಗೆ ಕಾಲೇಜು ಬೆಳೆದು ಬಂದ ದಾರಿ ಮತ್ತು ಕಾಲೇಜಿನ ಸೌಲಭ್ಯಗಳನ್ನು ಸಾಕ್ಷ್ಯಚಿತ್ರ ಪ್ರದರ್ಶಿಸುವ ಮೂಲಕ ಮನನ ಮಾಡಿಕೊಡಲಾಯಿತು.

ಈ ಸಂದರ್ಭ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ಪಿಯುಸಿ ವ್ಯಾಸಂಗವು ವಿದ್ಯಾರ್ಥಿಗಳಿಗೆ ಪ್ರಮುಖ ಘಟ್ಟವಾಗಿರುತ್ತದೆ. ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಪೈಪೋಟಿ ಇದೆ. ಆದಕಾರಣ ವಿದ್ಯಾರ್ಥಿಗಳು ಜಾಗೃತೆಯಿಂದ ಸಮಯ ಪರಿಪಾಲನೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಕಾಲೇಜಿನಲ್ಲಿ ಎನ್.ಎಸ್.ಎಸ್., ಎನ್.ಸಿ.ಸಿ., ಸ್ಪೋರ್ಟ್ ಮತ್ತಿತರ ಘಟಕಗಳಲ್ಲಿ ಸೇರಿಕೊಂಡು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಜೊತೆಗೆ ಶಿಸ್ತನ್ನು ರೂಢಿಸಿಕೊಂಡು ಮೊಬೈಲ್ ಬಳಕೆ ಮತ್ತು ಟಿ.ವಿ. ನೋಡುವದನ್ನು ಕಡಿಮೆಮಾಡುತ್ತಾ ಓದುವದರ ಕಡೆ ಹೆಚ್ಚು ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಉಪನ್ಯಾಸಕಿ ಪದ್ಮ ಸ್ವಾಗತಿಸಿದರೆ, ಡಾ.ರೇಖಾ ಚಿಣ್ಣಪ್ಪ ವಂದಿಸಿದರು. ಉಪನ್ಯಾಸಕ ಚೇತನ್ ಚಿಣ್ಣಪ್ಪ ಮತ್ತು ಸುದೇಶ್ ಕುಮಾರ್ ಅವರುಗಳು ಸಾಕ್ಷ್ಯಚಿತ್ರ ಪ್ರದರ್ಶನವನ್ನು ಉತ್ತಮವಾಗಿ ನಡೆಸಿಕೊಟ್ಟರು. ಉಪನ್ಯಾಸಕ ಮತ್ತು ಬೋಧಕೇತರರು ಉಪಸ್ಥಿತರಿದ್ದರು.ಕಾವೇರಿ ಕಾಲೇಜು: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತಾ ಕಾಲೇಜು ಜೀವನ ಎಂಬದು ವಿದ್ಯಾರ್ಥಿಗಳ ಪಾಲಿಗೆ ಬಹಳ ಅಮೂಲ್ಯವಾದದ್ದು, ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯ ಪಾಲನೆಯನ್ನು ಮೈಗೂಡಿಸಿಕೊಂಡು, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಈ ಸಂದರ್ಭ ಪ್ರಥಮ ಬಿ.ಕಾಂ, ಬಿಎ, ಬಿಎಸ್ಸಿ, ಬಿಸಿಎ ಹಾಗೂ ಬಿಬಿಎ ವಿದ್ಯಾರ್ಥಿಗಳು, ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕ ವೃಂದದವರು ಹಾಜರಿದ್ದರು.ಮೂರ್ನಾಡು: ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯೆ ಪ್ರತಿ ನಿತ್ಯದ ಕಾಯಕವಾಗಬೇಕು. ಆಗ ಮಾತ್ರ ಜೀವನದಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದು ಮೂರ್ನಾಡು ವಿದ್ಯಾಸಂಸ್ಥೆಯ ನಿರ್ದೇಶಕಿ ಪ್ರೊ. ಸುಶೀಲ ಸುಬ್ರಮಣಿ ಹೇಳಿದರು.

ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಕಾಲೇಜಿನ ಪ್ರಥಮ ವರ್ಷದ ಪ್ರಾರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದಾನಿಗಳು ನಿರ್ಮಾಣ ಮಾಡಿಕೊಟ್ಟಂತಹ ಈ ಪದವಿ ಕಾಲೇಜನ್ನು ಹಾಳುಗೆಡವದೆ, ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿಯಂತೆ ಬಳಸಿಕೊಳ್ಳುವಂತಾಗಬೇಕು. ಚಿಂತನೆಗಳು ಯಾವಾಗಲೂ ಸಕಾರಾತ್ಮಕವಾಗಿರಬೇಕು ಅಲ್ಲದೆ ಕಾಲೇಜಿನ ಆವರಣದೊಳಗೆ ಜಾತಿ-ಧರ್ಮಗಳಿಗೆ ಆದ್ಯತೆ ನೀಡದೆ ಎಲ್ಲರೂ ವಿದ್ಯಾರ್ಥಿಗಳೆಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ನಡುವೆ ಉತ್ತಮ ಬಾಂಧ್ಯವವನ್ನು ನಿರ್ಮಾಣ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕರುಣೆ, ಮಾನವೀಯತೆಯ ಕೊರತೆಯನ್ನು ಹೋಗಲಾಡಿಸುವ ಸಲುವಾಗಿ ಪದವಿಯಲ್ಲಿ ಭಾಷಾ ಪಠ್ಯಕ್ರಮಗಳನ್ನು ಅಳವಡಿಸಿರುವದು. ಇದರಿಂದ ಸಾಹಿತ್ಯಾಸಕ್ತಿಯನ್ನು ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಭಾಗೀರಥಿ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಎನ್.ಸಿ. ನವೀನ್, ಕೆ.ಜಿ. ಹರೀಶ್, ಎಸ್.ಬಿ. ದರ್ಶನ್, ಕೆ.ಕೆ. ಬೋಪಣ್ಣ, ಎನ್. ಹರ್ಷ ಮಂದಣ್ಣ, ಬಿ.ಎಂ. ಕಲ್ಪನ, ಬಿ.ಸಿ. ಶಾರದ, ಕೆ.ಎಸ್. ವಿಲ್ಮ, ಕೆ.ಬಿ. ಸೋಮಯ್ಯ, ಕೆ.ಸಿ ಅರ್ಪಿತ ಉಪಸ್ಥಿತರಿದ್ದರು.ಗೋಣಿಕೊಪ್ಪ ವರದಿ: ಕಾವೇರಿ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತಾ, ಕಾಲೇಜು ಜೀವನ ಎಂಬದು ವಿದ್ಯಾರ್ಥಿಗಳ ಪಾಲಿಗೆ ಬಹಳ ಅಮೂಲ್ಯವಾದದ್ದು.

ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯ ಪಾಲನೆಯನ್ನು ಮೈಗೂಡಿಸಿಕೊಂಡು, ಉತ್ತಮ ನಡವಳಿಕೆಯ ಜೊತೆಗೆ ತಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಈ ಸಂದÀರ್ಭ ಪ್ರಥಮ ಬಿ.ಕಾಂ, ಬಿಎ, ಬಿಎಸ್ಸಿ, ಬಿಸಿಎ ಹಾಗೂ ಬಿಬಿಎ ವಿದ್ಯಾರ್ಥಿಗಳು, ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕ ವೃಂದ ಹಾಜರಿದ್ದರು.