ಗೋಣಿಕೊಪ್ಪಲು, ಜೂ. 29 : ರಾಜ್ಯದ ಈಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅಂದು ಇಂಧನ ಸಚಿವರಾಗಿ ಹೆಚ್.ಡಿ.ರೇವಣ್ಣ ಅವರು 9 ವರ್ಷದ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭ ಕೊಡಗು ಜಿಲ್ಲೆಯಾದ್ಯಂತ ಬೆಳಕು ಹರಿಸಿ, ವಿದ್ಯುತ್ ಕ್ಷಾಮ ನೀಗಲು ಉತ್ತಮ ಕಾರ್ಯಯೋಜನೆ ರೂಪಿಸಲಾಗಿತ್ತು. ಕೆಪಿಟಿಸಿಎಲ್ ಮೂಲಕ ಬೃಹತ್ ಕಾಮಗಾರಿಯೂ ನಡೆದಿತ್ತು. ಸುಮಾರು ರೂ.85ಕೋಟಿ ವೆಚ್ಚದ ಕಾಮಗಾರಿ ಮೈಸೂರು ಸಮೀಪ ಬಸ್ತಿಪುರದಿಂದ ಕುಶಾಲನಗರದವರೆಗೆ 220 ಕೆ.ವಿ.ವಿದ್ಯುತ್ ಮಾರ್ಗ, ಕುಶಾಲನಗರ-ಸುಂಟಿಕೊಪ್ಪ ಮಾರ್ಗ ಮಡಿಕೇರಿಗೆ 66 ಕೆ.ವಿ.ವಿದ್ಯುತ್‍ಮಾರ್ಗ ಸಮರೋಪಾದಿಯಲ್ಲಿ ಮುಗಿದಿತ್ತು. ಪೆÇನ್ನಂಪೇಟೆ ವಿದ್ಯುತ್ ಉಪಕೇಂದ್ರದಿಂದ ವೀರಾಜಪೇಟೆ ಉಪಕೇಂದ್ರಕ್ಕೆ ಸುಮಾರು ರೂ.4 ಕೋಟಿ ವೆಚ್ಚದಲ್ಲಿ 66 ಕೆ.ವಿ.ವಿದ್ಯುತ್ ಮಾರ್ಗ ಕಾಮಗಾರಿಯೂ ದಾಖಲೆ ಅವಧಿಯಲ್ಲಿ ಮುಗಿಸಲಾಗಿತ್ತು. ಆದರೆ, ವೀರಾಜಪೇಟೆ ಮಡಿಕೇರಿ ನಡುವಿನ ಸುಮಾರು ರೂ.7 ಕೋಟಿ ವೆಚ್ಚದ 66 ಕೆ.ವಿ.ವಿದ್ಯುತ್ ಮಾರ್ಗದ ಕಾಮಗಾರಿ ಅದೇಕೋ ಕಳೆದ 10 ವರ್ಷದಿಂದಲೂ ಆರಂಭಗೊಂಡಿಲ್ಲ. ಇಷ್ಟು ವರ್ಷವೂ ಕೆಪಿಟಿಸಿಎಲ್ ಅಧಿಕಾರಿಗಳು ಸಬೂಬು ಹೇಳುತ್ತಾ ದಿನದೂಡಿದರೇ ವಿನಃ ಹೊಸ ಟೆಂಡರ್ ಪ್ರಕ್ರಿಯೆ ಇನ್ನೂ ಆರಂಭಿಸಿಲ್ಲ.

ಈ ಹಿಂದೆ ಸುಮಾರು ರೂ.6.75 ಕೋಟಿ ವೆಚ್ಚದ ವೀರಾಜಪೇಟೆಯಿಂದ ಮಡಿಕೇರಿವರೆಗೆ ಸುಮಾರು 172 ವಿದ್ಯುತ್ ಗೋಪುರ ನಿರ್ಮಾಣಕ್ಕೆ ‘ಶಿವಮೊಗ್ಗ ಸ್ಟೀಲ್ ಕಂಪೆನಿ’ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಗೋಪುರ ನಿರ್ಮಾಣಕ್ಕೆ ಗುತ್ತಿಗೆದಾರ ಕಂಪೆನಿ ಅಗತ್ಯ ಸಾಮಾನುಗಳನ್ನು ಖರೀದಿ ಮಾಡಿಯೂ ಆಗಿತ್ತು. ಮಡಿಕೇರಿ ಸಮೀಪ ಕರ್ಣಂಗೇರಿ ಅರಣ್ಯಪ್ರದೇಶದ ಅಂದಾಜು 3 ಕಿ.ಮೀ.ವ್ಯಾಪ್ತಿಯಲ್ಲಿ 8-10 ಗೋಪುರ ಅಳವಡಿಕೆಗೆ ಅರಣ್ಯ ಇಲಾಖೆಯ ತಕರಾರು ಹಿನ್ನೆಲೆ ಅಂದಿನ ಗುತ್ತಿಗೆದಾರ ಹಿಂದೇಟು ಹಾಕಿದ್ದು ದೀರ್ಘಾವಧಿ ಕಾಮಗಾರಿ ನೆನೆಗುದಿಗೆ ಕಾರಣ ಎಂದು ಹೇಳಲಾದರೂ ಇದೀಗ ಕರ್ಣಂಗೇರಿ ಅರಣ್ಯ ಪ್ರದೇಶ ಮಾರ್ಗ ವಿದ್ಯುತ್ ಗೋಪುರ ಅಳವಡಿಕೆಗೆ ರೂ.34 ಲಕ್ಷ ಮೊತ್ತವನ್ನು ಅರಣ್ಯ ಇಲಾಖೆಗೆ ಪಾವತಿಸಿ, ಅನುಮತಿ ಹೊಂದಿಕೊಂಡು ಎರಡು ಮೂರು ವರ್ಷ ಕಳೆದು ಹೋಗಿದೆ.

ಈ ನಡುವೆ ಹಳೆಯ ಗುತ್ತಿಗೆದಾರ ಕಾಮಗಾರಿ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದು, ಗೋಪುರ ಸಾಮಗ್ರಿಗಳು ಅವರಲ್ಲಿಯೇ ಇವೆ ಎಂಬ ಪಿಸುಮಾತೂ ಇದೀಗ ಮೇಲಧಿಕಾರಿ ವರ್ಗದಲ್ಲಿ ಕೇಳಿ ಬರುತ್ತಿದೆ. ಕಾಮಗಾರಿ 10 ವರ್ಷ ದೀರ್ಘ ಕಾಲ ನೆನೆಗುದಿಗೆ ಬಿದ್ದಿರುವ ಹಿನ್ನೆಲೆ ಹೊಸ ಟೆಂಡರ್ ಪ್ರಕ್ರಿಯೆ ಆರಂಭವಾಗಬೇಕಾಗಿದೆ. ಯೋಜನಾ ವೆಚ್ಚ ದುಪ್ಪಟ್ಟಾಗುವ ಸಾಧ್ಯತೆ ಕಂಡು ಬಂದಿದೆ. ಆಶ್ಚರ್ಯ ವಿಚಾರ ಎಂದರೆ ಉದ್ದೇಶಿತ ಕಾಮಗಾರಿ ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವಧಿಯಲ್ಲಿ ಆರಂಭಗೊಂಡಿತ್ತು. ಇದೀಗ ಅವರೇ ಮುಖ್ಯಮಂತ್ರಿಯಾಗಿ ಬಂದಿರುವದು ದಕ್ಷಿಣ ಕೊಡಗಿನ ವಿದ್ಯುತ್ ಗ್ರಾಹಕರಲ್ಲಿ ಹೊಸ ಆಶಾಭಾವನೆಗೆ ಕಾರಣವಾಗಿದೆ. ಈ ಬಾರಿಯಾದರೂ ಉದ್ಧೇಶಿತ ಕಾಮಗಾರಿ ಮುಗಿದಲ್ಲಿ ದಕ್ಷಿಣ ಕೊಡಗಿನ ಬಹುಭಾಗ ಗ್ರಾಮಗಳಿಗೆ ಮಳೆ-ಗಾಳಿ ಸಂದರ್ಭ ಅನಿಯಮಿತ ವಿದ್ಯುತ್ ಸರಬರಾಜು, ಪವರ್‍ಕಟ್ ಇತ್ಯಾದಿ ಕಿರಿಕಿರಿಗೆ ಮುಕ್ತಿ ದೊರೆಯಲಿದೆ.

ಕುಶಾಲನಗರ 220 ಕೆ.ವಿ.ವಿದ್ಯುತ್ ಕೇಂದ್ರಕ್ಕೆ ಮೈಸೂರು ಸಮೀಪ ಬಸ್ತಿಪುರ ಹಾಗೂ ಹೂಟಗಳ್ಳಿ ವಿದ್ಯುತ್ ಲೇನ್ ಮಾರ್ಗ ‘ಪವರ್ ಗ್ರಿಡ್ ಕಾಪೆರ್Çೀರೇಷನ್’ ಮೂಲಕ ವಿದ್ಯುತ್ ಸರಬರಾಜಾಗುತ್ತಿದ್ದರೆ, ಪೆÇನ್ನಂಪೇಟೆ 66 ಕೆ.ವಿ.ಉಪಕೇಂದ್ರಕ್ಕೆ ಹೂಟಗಳ್ಳಿ-ಹುಣಸೂರು-ಪಿರಿಯಾಪಟ್ಟಣ-ಅಳ್ಳೂರು- ಆನೆಚೌಕೂರು ಮಾರ್ಗ ವಿದ್ಯುತ್ ಸರಬರಾಜಾಗುತ್ತಿದೆ. ಆನೆಚೌಕೂರು ಹಾಗೂ ತಿತಿಮತಿ ವ್ಯಾಪ್ತಿಯ ಕಾಫಿ ತೋಟ ಪ್ರದೇಶದಲ್ಲಿ ಮಳೆಗಾಳಿಗೆ ವಿದ್ಯುತ್ ಲೇನ್ ಮೇಲೆ ಮರ ಉರುಳಿಬಿದ್ದಲ್ಲಿ ಇಡೀ ದಕ್ಷಿಣ ಕೊಡಗು ಕತ್ತಲೆಯಲ್ಲಿ ಮುಳುಗುವ ಸ್ಥಿತಿ ಈಗಲೂ ಮುಂದುವರಿದಿದೆ. ಇಂತಹಾ ಪರಿಸ್ಥಿತಿಯಲ್ಲಿ ವೀರಾಜಪೇಟೆ-ಮಡಿಕೇರಿ 66 ಕೆ.ವಿ.ವಿದ್ಯುತ್ ಮಾರ್ಗ ಪೂರ್ಣಗೊಂಡಿದ್ದೇ ಆದಲ್ಲಿ ಕುಶಾಲನಗರ-ಮಡಿಕೇರಿ ಮಾರ್ಗ ವೀರಾಜಪೇಟೆ ಉಪಕೇಂದ್ರಕ್ಕೆ ವಿದ್ಯುತ್ ಹರಿಯಲು ಸಾಧ್ಯವಿತ್ತು. ಇದೀಗ ಕೆಪಿಟಿಸಿಎಲ್ ಶ್ರೀಮಂಗಲ, ನಾಪೆÇೀಕ್ಲು ಒಳಗೊಂಡಂತೆ ಸೋಮವಾರಪೇಟೆ ತಾಲೂಕಿನ ಕೆಲವು ಭಾಗಗಳಲ್ಲಿ 66 ಕೆ.ವಿ.ವಿದ್ಯುತ್ ಉಪಕೇಂದ್ರ ಆರಂಭಿಸಲು ಯೋಜನೆ ಹಾಕಿಕೊಂಡಿದೆ. ಆದರೆ, ಉದ್ಧೇಶಿತ ವೀರಾಜಪೇಟೆ-ಮಡಿಕೇರಿ ನಡುವೆ 172 ವಿದ್ಯುತ್ ಗೋಪುರ ಅಳವಡಿಕೆ ಮೂಲಕ 66 ಕೆ.ವಿ.ವಿದ್ಯುತ್ ಲೇನ್ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ನಿರಂತರ ‘ಪವರ್ ಕಟ್’ ತೊಂದರೆ ಕಾಡುವದು ಖಚಿತ

ಈ ಹಿಂದೆ 1980ರ ದಶಕದಲ್ಲಿ ಗೋಣಿಕೊಪ್ಪಲು

(ಮೊದಲ ಪುಟದಿಂದ) ಕೆಇಬಿ ಕಚೇರಿಯಲ್ಲಿ ಇಂಜಿನಿಯರ್ ಆಗಿದ್ದ ನಿತ್ಯಾನಂದ ಅವರೇ ಇದೀಗ ಕೆಪಿಟಿಸಿಎಲ್ ಕೊಡಗು-ಮೈಸೂರು ವೃತ್ತದ ಮುಖ್ಯ ಅಭಿಯಂತರರಾಗಿದ್ದಾರೆ. ಇವರಿಗೆ ದಕ್ಷಿಣ ಕೊಡಗಿನ ಸಮಸ್ಯೆ ಚೆನ್ನಾಗಿ ತಿಳಿದಿದೆ. ಸೆಸ್ಕ್ ಅಧೀಕ್ಷಕ ಅಭಿಯಂತರ ಪ್ರತಾಪ್ ಅವರು ಇತ್ತೀಚೆಗೆ ವೀರಾಜಪೇಟೆಯಲ್ಲಿ ಜರುಗಿದ ಸಂಪರ್ಕ ಸಭೆಯಲ್ಲಿ ಇನ್ನು ಒಂದು ತಿಂಗಳಿನಲ್ಲಿ ನೂತನ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಹೇಳಿದರೂ ಅದು ಹಾರಿಕೆ ಉತ್ತರ! ಎಂದು ಹೇಳಲಾಗುತ್ತಿದೆ.

ಈ ಹಿಂದೆ ಹಲವು ಕೊಡಗು ಉಸ್ತುವಾರಿ ಸಚಿವರಿಗೆ ಕಾಮಗಾರಿ ವಿಳಂಬಗತಿ ಬಗ್ಗೆ ಮನವಿ ಮಾಡಲಾಗಿತ್ತು. ಹಿಂದಿನ ಕೆ.ಜೆ.ಜಾರ್ಜ್ ಉಸ್ತುವಾರಿ ಸಚಿವರಾಗಿದ್ದ ಸಂದರ್ಭವೂ ಮನವಿ ಮಾಡಲಾಗಿತ್ತು. ಆದರೆ, ಏನೂ ಪ್ರಯೋಜನವಾಗಿಲ್ಲ. ಇದೀಗ ಮತ್ತೆ ಕೆ.ಜೆ.ಜಾರ್ಜ್ ಅವರೇ ಕೊಡಗು ಉಸ್ತುವಾರಿ ಸಚಿವರಾಗಿ ಬರುವ ಸಾಧ್ಯತೆ ಇದ್ದು ಈ ಬಾರಿಯಾದರೂ ಆಸಕ್ತಿ ವಹಿಸಬಹುದೇ ಎಂಬ ಜಿಜ್ಞಾಸೆ ಸಾರ್ವಜನಿಕ ವಲಯದಲ್ಲಿದೆ.

ಬಿ.ಕೆ.ಕುಶಾಲಪ್ಪ ಆಸಕ್ತಿ

ಚೆಸ್ಕ್‍ನಲ್ಲಿ ಅಧಿಕಾರಿಯಾಗಿದ್ದ ಬೊಳಕಾರಂಡ ಕೆ. ಕುಶಾಲಪ್ಪ ಅವರು ಮುಂಬಡ್ತಿ ಹೊಂದಿ ಈ ಹಿಂದೆ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರರಾಗಿದ್ದ ಸಂದರ್ಭವೇ ಮೈಸೂರು-ಕುಶಾಲನಗರ 220 ಕೆ.ವಿ. ವಿದ್ಯುತ್ ಲೇನ್, ಕುಶಾಲನಗರ-ಮಡಿಕೇರಿ ಹಾಗೂ ಪೆÇನ್ನಂಪೇಟೆ-ವೀರಾಜಪೇಟೆ 66 ಕೆ.ವಿ. ವಿದ್ಯುತ್ ಲೇನ್ ಸಮರೋಪಾದಿಯಲ್ಲಿ ಕಾಮಗಾರಿ ಮುಗಿಸಲಾಗಿತ್ತು. ವೀರಾಜಪೇಟೆ-ಮಡಿಕೇರಿ ಕಾಮಗಾರಿ ಕೈಗೆತ್ತಿಕೊಳ್ಳುವ ಸಂದರ್ಭ ಅವರು ನಿವೃತ್ತರಾಗಿದ್ದರು. ಇದೀಗ ನಿವೃತ್ತಿಯ ನಂತರವೂ ವೀರಾಜಪೇಟೆ-ಮಡಿಕೇರಿ 66 ಕೆ.ವಿ.ವಿದ್ಯುತ್ ಲೇನ್ ಕಾಮಗಾರಿ ಆರಂಭಕ್ಕೆ ನಿರಂತರ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಂಪರ್ಕವಿದ್ದಾಗ್ಯೂ ಇವರ ಮಾತಿಗೆ ಯಾರೂ ಬೆಲೆ ಕೊಡುತ್ತಿಲ್ಲ. ಯಾರೇ ಕಾಮಗಾರಿ ಆರಂಭಿಸಲಿ ಅವರಿಗೆ ತಾನೂ ಪೂರಕ ಸಹಕಾರ ನೀಡುತ್ತೇನೆ ಎಂದು ಹೇಳಿದರೂ ಇವರ ಅನುಭವ ಹಂಚಿಕೊಳ್ಳಲು ಈಗಿನ ಅಧಿಕಾರಿಗಳು ಸಿದ್ಧರಿಲ್ಲ. ಸರಿಯಾದ ಸಮಯಕ್ಕೆ ಕಾಮಗಾರಿ ಆರಂಭವಾಗಿದ್ದರೆ 2011ಕ್ಕೆ ವೀರಾಜಪೇಟೆ-ಮಡಿಕೇರಿ ಕೆಲಸ ಮುಗಿಯಬೇಕಿತ್ತು. ಕೊಡಗಿನ ವಿದ್ಯುತ್ ಬಳಕೆದಾರರು, ಉದ್ಯಮಿಗಳು, ಕೃಷಿಕರು ಪ್ರಾಮಾಣಿಕವಾಗಿ ವಿದ್ಯುತ್ ಬಿಲ್ ಪಾವತಿಸುತ್ತಾ ಬಂದಿದ್ದು, ಕೆಪಿಟಿಸಿಎಲ್ ಅಧಿಕಾರಿಗಳು ಇದಕ್ಕೆ ಪ್ರತಿಫಲವಾಗಿ ನೀಡುತ್ತಿರುವ ಉಡುಗೊರೆ ಲಂಗು ಲಗಾಮಿಲ್ಲದ ‘ಪವರ್‍ಕಟ್’. ಓಲ್ಟೇಜ್ ಡ್ರಾಪ್ ಇತ್ಯಾದಿಗಳಿಂದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಕುಡಿಯುವ ನೀರು ಸರಬರಾಜು ಮೇಲೆಯೂ ಪರಿಣಾಮ ಬೀರಿದೆ. ಇದೀಗ ಇಲ್ಲಿನ ಜನತೆ ಮತ್ತೆ ಕುಮಾರಸ್ವಾಮಿ ಆಡಳಿತ ದಕ್ಷಿಣ ಕೊಡಗಿನ ಮೇಲೆ ಬೆಳಕು ಹರಿಸಬಹುದೇ ಎಂಬ ನಿರೀಕ್ಷೆಯಲ್ಲಿರುವದಂತೂ ದಿಟ.