ಮಡಿಕೇರಿ, ಜೂ. 29: ಜಿಲ್ಲಾ ಕೇಂದ್ರ ಮಡಿಕೇರಿಗೆ ಶುಕ್ರವಾರದ ಸಂತೆಗೆಂದು ಜಿಲ್ಲೆಯ ಗ್ರಾಮೀಣ ರೈತರು ಸೇರಿದಂತೆ ಬಹುತೇಕ ಎಲ್ಲೆಡೆಯಿಂದ ವ್ಯಾಪಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಹೊರ ಜಿಲ್ಲೆಗಳಿಂದಲೂ ಬೇರೆ ಬೇರೆ ನಿತ್ಯೋಪಯೋಗಿ ವಸ್ತುಗಳ ಸಹಿತ; ಸೊಪ್ಪು, ತರಕಾರಿ ಮಾರಾಟಕ್ಕೆ ಬರುವವರಿದ್ದರೆ, ಇಂಥ ವರ್ತಕರು ಮಾರುಕಟ್ಟೆ ವ್ಯವಸ್ಥೆ, ಮೂಲಭೂತ ಸೌಕರ್ಯವಿಲ್ಲದೆ ಬೆಳಿಗ್ಗೆಯಿಂದ ಸಂಜೆಯ ತನಕ ಪರಿತಪಿಸುತ್ತಿದ್ದಾರೆ.ಇಲ್ಲಿ ಕೋಟಿ ಕೋಟಿ ಹಣ ವ್ಯಯಿಸಿ ಬೃಹತ್ ಕಟ್ಟಡ ತಲೆಯಿತ್ತಿದೆ. ಅದು ಯಾರ ಉಪಯೋಗಕ್ಕೂ ಇಲ್ಲದೆ ಮಳೆಯಿಂದ ತೋಯ್ದು ಹೋಗಿದೆ. ಯಾರೊಬ್ಬರೂ ಈ ಮಾರುಕಟ್ಟೆ ಸಂಕೀರ್ಣದೊಳಗೆ ವ್ಯಾಪಾರ ಮಾಡದಷ್ಟು ಅವ್ಯವಸ್ಥೆಯ ಅಗರವಾಗಿ ವ್ಯರ್ಥಗೊಂಡಂತೆ ಭಾಸವಾಗುತ್ತಿದೆ.ಇಂದು ಶುಕ್ರವಾರದ ಸಂತೆಯಲ್ಲಿ ಗ್ರಾಮೀಣ ವ್ಯಾಪಾರಿಗಳು ಹಳೆಯ ಮಾರುಕಟ್ಟೆ ಆವರಣದಲ್ಲೂ ಜಾಗವಿಲ್ಲದೆ; ಪಿರಿ ಪಿರಿ ಮಳೆಯ ನಡುವೆ ರಸ್ತೆಯ ಇಕ್ಕಡೆಗಳಲ್ಲಿ ಸೊಪ್ಪು ತರಕಾರಿ ಇತ್ಯಾದಿ

ಸರಿಪಡಿಸಲು ಹೊಸ ಯೋಜನೆಗೆ ಮಂಜೂರು

ಮಾರುಕಟ್ಟೆಯಲ್ಲಿನ ದುರವಸ್ಥೆಯನ್ನು ಸರಿಪಡಿಲು ಇದೀಗ ಹೊಸ ಯೋಜನೆ ಮಂಜೂರಾಗಿದೆ. ಮಡಿಕೇರಿ ನಗರಸಭಾ ಆಯುಕ್ತರಾದ ಶುಭ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ 2011ರಲ್ಲಿ ಈ ಯೋಜನೆ ಜಾರಿಗೊಂಡಿತ್ತು. ಆಗ ಯಾವ ರೀತಿ ಯೋಜನಾ ನಕ್ಷೆ ರೂಪಿಸಲಾಗಿತ್ತು ಎಂಬ ಅರಿವು ತನಗಿಲ್ಲ. ಏಕೆಂದರೆ ಕಳೆದ 3 ವರ್ಷಗಳಿಂದಷ್ಟೆ ವಿಳಂಬವಾಗಿ ಸಾರ್ವಜನಿಕರ ಆಗ್ರಹದ ಮೇಲೆ ಈ ಕೆಲಸ ಆರಂಭಗೊಂಡಿತು. ತಾನು ಕೂಡ ನೂತನ ಮಾರುಕಟ್ಟೆ ನಿರ್ಮಾಣದ ಶೀಘ್ರ ಕೆಲಸಕ್ಕೆ ಒತ್ತು ಕೊಟ್ಟಿದ್ದೆ ಎಂದು ತಿಳಿಸಿದರು.

ಕೆಲಸ ಮುಕ್ತಾಯಗೊಂಡ ಬಳಿಕವಷ್ಟೇ ಮಡಿಕೇರಿ ನಗರದ ಮುಂಗಾರು ಮಳೆಗೆ ಪೂರಕವಾಗಿ ಈ ಯೋಜನಾ ನಕ್ಷೆ ರಚನೆಗೊಂಡಿರಲಿಲ್ಲ ಎಂಬದು ಗೊತ್ತಾಯಿತು. ಈಗ ಮಾರುಕಟ್ಟೆ ಸದ್ಬಳಕೆಯಾಗಬೇಕಾದರೆ ಇದನ್ನು ಸರಿಪಡಿಸಲೇಬೇಕಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿಯವರು ಈಗಾಗಲೇ ರೂ. 50 ಲಕ್ಷ ನೂತನ ಯೋಜನೆಗೆ ಮಂಜೂರು ನೀಡಿದ್ದಾರೆ. ಇದಕ್ಕಾಗಿ ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುತ್ತದೆ. ಮುಖ್ಯವಾಗಿ ಇದರಲ್ಲಿ ಮಳೆ ಎರಚಲು ನೀರು ಒಳ ಬರದಂತೆ ಶೀಟರ್‍ಗಳನ್ನು ಅಳವಡಿಸಬೇಕಾಗುತ್ತದೆ. ಕಟ್ಟಡದ ಹಿಂಬದಿಯಲ್ಲಿ ಒಳಚರಂಡಿ ತೆರೆಯಬೇಕಾಗುತ್ತದೆ. ಅಲ್ಲದೆ, ಕಟ್ಟಡದ ನೆಲಭಾಗವನ್ನು ದುರಸ್ತಿಗೊಳಿಸಬೇಕಾಗಿದೆ ಎಂದು ಶುಭಾ ಮಾಹಿತಿಯಿತ್ತರು. ಈ ಕಾಮಗಾರಿಗಳು ಪೂರ್ಣಗೊಳ್ಳಲು ಕನಿಷ್ಟ 2 ತಿಂಗಳು ಅಗತ್ಯವಿದೆ. ಆ ನಂತರವಷ್ಟೇ ಮಾರುಕಟ್ಟೆ ಕಟ್ಟಡವನ್ನು ವ್ಯಾಪಾರ-ವಹಿವಾಟಿಗೆ ಬಳಸಲು ಸಾಧ್ಯವಿದೆ ಎಂದು ಅವರು ನುಡಿದರು.

ಬಸ್ ನಿಲ್ದಾಣ ರಸ್ತೆ ಸರ್ವೆ

ಮಡಿಕೇರಿ ಖಾಸಗಿ ಬಸ್ ನಿಲ್ದಾಣದ ಕೆಲಸದ ಕುರಿತು ಮಾಹಿತಿ ಬಯಸಿದಾಗ ಈಗಾಗಲೇ ಬಸ್‍ಗಳು ಸಂಚರಿಸಲು

(ಮೊದಲ ಪುಟದಿಂದ) ವ್ಯಾಪಾರ ನಡೆಸುತ್ತಾ ಗೋಳಾಡುತ್ತಿದ್ದರೆ; ಖರೀದಿಗೆ ಬಂದಿದ್ದ ಗ್ರಾಹಕರು ಪರಿತಪಿಸುತ್ತಿದ್ದ ದೃಶ್ಯ ಎದುರಾಯಿತು.

ಮಾರುಕಟ್ಟೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎಂ. ಇಸ್ಮಾಯಿಲ್ ಈ ಸಂದರ್ಭ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸುತ್ತಾ, ಅನೇಕ ಸಲ ನಗರಸಭೆಗೆ ಮನವಿ ಸಲ್ಲಿಸಿದರೂ, ಯಾವದೇ ಮೂಲಭೂತ ಸೌಕರ್ಯ ಕಲ್ಪಿಸದೆ; ಹೊಸ ಕಟ್ಟಡದಲ್ಲೂ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು.

ಸಂತೆ ಸುಂಕ : ವಾರ್ಷಿಕ ರೂ. 21 ಲಕ್ಷಕ್ಕೂ ಅಧಿಕ ಹಣ ಸಂತೆ ಸುಂಕ ಎತ್ತಾವಳಿಯಿಂದ ನಗರಸಭೆ ಪಡೆಯುತ್ತಿದ್ದರೂ, ಕನಿಷ್ಟ ಸೌಲಭ್ಯ ಒದಗಿಸಿಲ್ಲವೆಂದೂ ಈ ಬಗ್ಗೆ ತಾನು ಬೇರೆ ಬೇರೆ ಕಡೆಯಿಂದ ವ್ಯಾಪಾರಕ್ಕೆ ಬರುವವರಿಗೆ ಉತ್ತರಿಸಲಾಗದೆ ಪಶ್ಚಾತ್ತಾಪ ಪಡುವಂತಾಗಿದೆ ಎಂದರು.

ಪ್ರಸಕ್ತ ಸಂತೆ ಸುಂಕ ಅವಧಿಯೂ ಮುಗಿದಿದ್ದು, ತಿಂಗಳಿಗೆ ಶೇ. 18ರಷ್ಟು ಅಧಿಕ ಸುಂಕವನ್ನು ನಗರಸಭೆಗೆ ಪಾವತಿಸುತ್ತಿರುವದಾಗಿ ನುಡಿದರು. ಕಳೆದ ಎರಡು ವರ್ಷದಿಂದ ಹೊಸ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವದಾಗಿ ಭರವಸೆ ನೀಡಿದ್ದರೂ, ಈ ಮಳೆಯಲ್ಲೂ ಲಭಿಸಿಲ್ಲವೆಂದು ಗ್ರಾಮೀಣ ವ್ಯಾಪಾರಿಗಳಾದ ಪೊನ್ನಕ್ಕಿ, ಕುಶಾಲಪ್ಪ, ರವಿ, ಗಣೇಶ್ ಮೊದಲಾದವರು ಅಸಮಾಧಾನ ತೋಡಿಕೊಂಡರು.