ಆಲೂರು-ಸಿದ್ದಾಪುರ, ಜೂ. 29: ಸಮೀಪದ ಮಾಲಂಬಿ ಗ್ರಾಮದ ಸರಕಾರಿ ಗಿರಿಜನರ ಹಿರಿಯ ಪ್ರಾಥಮಿಕ ಆಶ್ರಮ ಶಾಲೆಯಲ್ಲಿ 2018-19ನೇ ಸಾಲಿನ ವಿಶೇಷ ಹಾಜರಾತಿ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಆಲೂರು-ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್ ನೇತೃತ್ವದಲ್ಲಿ ಗ್ರಾ.ಪಂ. ಸದಸ್ಯರಾದ ಎಸ್.ಜೆ. ಪ್ರಸನ್ನಕುಮಾರ್, ಎಂ.ಆರ್. ತೀರ್ಥಾನಂದ್, ಆಶ್ರಮ ಶಾಲೆ ಎಸ್‍ಡಿಎಂಸಿ ಅಧ್ಯಕ್ಷ ರಮೇಶ್, ಅಂಗನವಾಡಿ ಶಿಕ್ಷಕಿ ವೇದÀಕುಮಾರಿ, ಆಶಾ ಕಾರ್ಯಕರ್ತೆ ರಾಧ ಹಾಗೂ ಆಶ್ರಮ ಶಾಲೆ ಮುಖ್ಯ ಶಿಕ್ಷಕ ರಜನಿ ಕಾಂತ್ ಮತ್ತು ಆಶ್ರಮ ಶಾಲೆ ಶಿಕ್ಷಕರ ತಂಡ ಗಿರಿಜನ ಹಾಡಿಯ ಮನೆಗಳಿಗೆ ತೆರಳಿ ವಿಶೇಷ ಹಾಜರಾತಿ ಆಂದೋಲನದ ಕುರಿತು ಹಾಡಿ ಪೋಷಕರಿಗೆ ಮನವರಿಕೆ ಮಾಡಿ ಕೊಟ್ಟರು. ಮಾಲಂಬಿ ಗ್ರಾಮದ ಸರಕಾರಿ ಗಿರಿಜನರ ಹಿರಿಯ ಪ್ರಾಥಮಿಕ ಆಶ್ರಮ ಶಾಲೆಯಲ್ಲಿ 1 ರಿಂದ 7ನೇ ತರಗತಿ ಗಳಿದ್ದು ಪ್ರಸ್ತುತ ಸಾಲಿನಲ್ಲಿ ಒಟ್ಟು 105 ವಿದ್ಯಾರ್ಥಿಗಳಿದ್ದಾರೆ. ಹೆಚ್ಚಾಗಿ ಬೇರೆ ಕಡೆಯಿಂದ ಬಂದ ವಿದ್ಯಾರ್ಥಿಗಳು ಈ ಆಶ್ರಮ ಶಾಲೆಯಲ್ಲಿ ಕಲಿಯುತ್ತಿರುವ ಹಿನ್ನೆಲೆ ಮಾಲಂಬಿ ಗಿರಿಜನ ಹಾಡಿಯ ಮಕ್ಕಳ ಹಾಜರಾತಿ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ವಿಶೇಷ ಹಾಜರಾತಿ ಆಂದೋಲನ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭ ಆಂದೋಲನ ತಂಡ ಗಿರಿಜನ ಹಾಡಿಯ ಮನೆಮನೆಗಳಿಗೆ ತೆರಳಿ ಗಿರಿಜನ ಪೋಷಕರು ತಪ್ಪದೆ ತಮ್ಮ ಮಕ್ಕಳನ್ನು ಆಶ್ರಮ ಶಾಲೆಗೆ ಸೇರಿಸುವ ಮೂಲಕ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಪೋಷಕರಿಗೆ ಮನವರಿಕೆ ಮಾಡಿ ಕೊಟ್ಟಿತು. ಮಾಲಂಬಿ ಗಿರಿಜನ ಆಶ್ರಮ ಶಾಲೆಯ ಹಾಜರಾತಿ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ನಮ್ಮ ಆಶ್ರಮ ಶಾಲೆಯ ಶಿಕ್ಷಕರು ಸೇರಿಕೊಂಡು ಗಿರಿಜನ ಹಾಡಿಯಲ್ಲಿ ವಿಶೇಷ ಹಾಜರಾತಿ ಆಂದೋಲನ ನಡೆಸಲಾಗಿತ್ತು.