ಸುಂಟಿಕೊಪ್ಪ: ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲಾ ಸಂಸತ್ (ವಿದ್ಯಾರ್ಥಿ ಸಂಘ)ಗೆ ವಿದ್ಯಾರ್ಥಿಗಳಿಗೆ ಸಾಮಾನ್ಯ ಚುನಾವಣಾ ಮಾದರಿಯಲ್ಲಿ ಚುನಾವಣೆ ನಡೆಸಲಾಯಿತು.

ಚುನಾವಣಾ ಮಾದರಿಯಲ್ಲಿ ನಡೆದ ಮತದಾನದಲ್ಲಿ ವಿದ್ಯಾರ್ಥಿಗಳು ಸಂತೋಷದಿಂದ ಮತದಾನ ಮಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಗೆ ಆರಿವು ಮೂಡಿಸುವ ದಿಸೆಯಲ್ಲಿ ಸಾಮಾನ್ಯ ಚುನಾವಣಾ ಮಾದರಿಯಂತೆ ವಿದ್ಯಾರ್ಥಿಗಳು ಮತದಾನ ಮಾಡಿದ್ದಾರೆ ಎಂದು ವಿದ್ಯಾರ್ಥಿ ಸಂಘದ ರೆಕ್ಟಾರ್ ಸಿ.ಟಿ.ಸೋಮಶೇಖರ್ ತಿಳಿಸಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆಯ ದಿನನಿತ್ಯದ ಚಟುವಟಿಕೆಗಳನ್ನು ವಿದ್ಯಾರ್ಥಿಗಳಲ್ಲಿ ನಿರ್ವಹಿಸುವ ದಿಸೆಯಲ್ಲಿ ಮಂತ್ರಿಮಂಡಲ ರಚಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸಲು ಶಾಲಾ ಸಂಸತ್ ಸಹಕಾರಿಯಾಗಿದೆ ಎಂದು ಶಾಲಾ ಶಿಕ್ಷಕ ಬಾಲಕೃಷ್ಣ ಹೇಳಿದರು.

ಶಿಕ್ಷಕಿ ಎಂ.ಎನ್. ಲತಾ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಟಿ.ಜಿ. ಪ್ರೇಮ್‍ಕುಮಾರ್, ಎಸ್.ಆರ್. ಚಿತ್ರಾ, ಕೆ.ಕೆ. ಪುಷ್ಪ, ಶಾಂತ ಹೆಗ್ಡೆ, ಟಿ. ಪವಿತ್ರ, ಎಂ.ಆರ್. ಸುನಂದ, ಮಂಜುಳ ಕೆರೂರು ಮತದಾನ ಪ್ರಕ್ರಿಯೆ ನಡೆಸಿಕೊಟ್ಟರು.

ಮತದಾನಕ್ಕೆ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ವಿದ್ಯಾರ್ಥಿಗಳು ಮತಚೀಟಿ ಪಡೆದು ಮತದಾನ ಮಾಡಿದರು. ವಿದ್ಯಾರ್ಥಿಗಳಿಗೆ ಮತದಾನ ಮಾಡಿದ ಸಲುವಾಗಿ ಬೆರಳಿಗೆ ಇಂಕಿನಿಂದ ಗುರುತು ಹಾಕಲಾಯಿತು. ಮತದಾನ ಮಾಡಲು ಮತಪೆಟ್ಟಿಗೆ ಇಡಲಾಗಿತ್ತು.

ನಂತರ ಮತ ಎಣಿಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿ ಮತ ಎಣಿಕೆ ಮಾಡಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಲಾಯಿತು.ಕೂಡಿಗೆ: ಸಮೀಪದ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಶಾಲಾ ಸಂಸತ್ ರಚನೆ ಮಾಡಲಾಯಿತು.

ಪ್ರಧಾನಮಂತ್ರಿಯಾಗಿ ಬಿ.ಕೆ. ಭೂಮಿಕ ಅತಿ ಹೆಚ್ಚು ಮತಗಳಿಸಿ ಆಯ್ಕೆಯಾದರು. ಎಂ.ಎಂ. ಪವನ್ ಗೃಹಮಂತ್ರಿ, ಆರೋಗ್ಯ ಮಂತ್ರಿ ಅಸ್ಮಿಯ ಮತ್ತು ರಾಜೇಶ್ವರಿ, ಕ್ರೀಡಾ ಮಂತ್ರಿ ಚೈತನ್ಯ ಮತ್ತು ದಿನೇಶ್, ತೋಟಗಾರಿಕಾ ಮಂತ್ರಿ ನಾದಿರಾ, ತ್ರಿವೇಣಿ, ಕೀರ್ತನ ಮತ್ತು ಕುಮಾರ್, ಪರಿಸರ ಸಂರಕ್ಷಣೆ ಮಂತ್ರಿ ಪವನ್‍ಕುಮಾರ್ ಮತ್ತು ಮಹಾದೇವ, ವಾರ್ತಾ ಮಂತ್ರಿ ಅನುಷ ಮತ್ತು ಸರಿತ, ಸಫಾಯ ಮಂತ್ರಿ ಅನಿತ ಮತ್ತು ಮಹೇಶ್, ಸಾಂಸ್ಕøತಿಕ ಮಂತ್ರಿ ನಿಫಾನ, ನಯನ ಹಾಗೂ ಇತರ ಶಾಲಾ ನಾಯಕರುಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

ಶಾಲಾ ಮುಖ್ಯಶಿಕ್ಷಕ ಹೆಚ್.ಕೆ. ಕುಮಾರ್ ಚುನಾವಣೆಯ ವಿವರವನ್ನು ನೀಡಿದರು. ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಶಾಲೆಯಲ್ಲಿ ಚುನಾವಣೆ ನಡೆಸಿ ಮತಚಲಾಯಿಸುವ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿ ಸಂಸತ್ ರಚನೆ ಮಾಡಲಾಯಿತು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಚುನಾವಣಾಧಿಕಾರಿಯಾಗಿ ಶಿಕ್ಷಕರಾದ ಚೇತನ್‍ಕುಮಾರ್ ಆರ್ ಮತ್ತು ಆಶಾಮಣಿ, ಮತಗಟ್ಟೆಗಳ ಅಧಿಕಾರಿಗಳಾಗಿ ಜಯಲಕ್ಷ್ಮಿ, ಸುರೇಶ್, ಶೋಭ, ಗಂಗಮ್ಮ, ಸರೋಜ ಕಾರ್ಯನಿರ್ವಹಿಸಿದರು.