ವೀರಾಜಪೇಟೆ, ಜೂ. 29: ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಪೊನ್ನಂಪೇಟೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಕಾನೂನು ಸಾಕ್ಷರತಾ ರಥವನ್ನು 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ. ರಮಾ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು.

ಈ ಸಂದರ್ಭ ಸಮುಚ್ಚಯ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷಣ ಅಂಚಿ, ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು, ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್ ಜಯಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ನ್ಯಾಯಾಲಯದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

ಕಾನೂನು ಸಾಕ್ಷರತಾ ರಥವು ತಾ. 27 ರಿಂದ 30 ರವರೆಗೆ ಅಮ್ಮತ್ತಿ, ಸಿದ್ದಾಪುರ, ಅವರೆಗುಂದ, ಕೆದಮುಳ್ಳೂರು, ಕಡಂಗ, ವೀರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು, ಪಟ್ಟಣ ಪಂಚಾಯಿತಿ ರೋಟರಿ ಶಾಲೆ ವೀರಾಜಪೇಟೆ, ರಾಮಕೃಷ್ಣ ಶಾರದ ಆಶ್ರಮ ಪೊನ್ನಂಪೇಟೆ, ಮಹಿಳಾ ಸಂಘ ಗೋಣಿ ಕೊಪ್ಪಲು, ತಿತಿಮತಿ ಕಡೆಗಳಲ್ಲಿ ಸಂಚರಿಸಿಲಿದೆ.

ಈ ಸಂದರ್ಭ ಸಾರ್ವಜನಿ ಕರಿಗೆ ವಿಶೇಷ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.