ಕುಶಾಲನಗರ, ಜೂ. 29: ದುಬಾರೆ ಸಾಕಾನೆ ಶಿಬಿರದಲ್ಲಿ ನೆಲೆನಿಂತಿದ್ದ ಶತಮಾನ ಕಂಡ ಪ್ರವಾಸಿ ಬಂಗ್ಲೆಗೆ ಇದೀಗ ಅರಣ್ಯ ಇಲಾಖೆ ಕಾಯಕಲ್ಪ ನೀಡಿ ನೂತನ ರೂಪ ಕಲ್ಪಿಸಿದೆ. 1897 ರಲ್ಲಿ ನಿರ್ಮಾಣಗೊಂಡಿದ್ದ ಪ್ರವಾಸಿ ಮಂದಿರ ಇದೀಗ ಆನೆ ಮಹಲ್ ಆಗಿ ಪರಿವರ್ತನೆಗೊಂಡಿದೆ.

ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಬಂಗ್ಲೆ ಹೈಟೆಕ್ ಸ್ಪರ್ಶದೊಂದಿಗೆ ಅಂದಾಜು ರೂ. 50 ಲಕ್ಷ ವೆಚ್ಚದಲ್ಲಿ ಕಂಗೊಳಿಸುತ್ತಿದೆ. ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲು ಸಿದ್ಧಗೊಂಡಿದೆ.

ಎರಡು ಕೊಠಡಿಗಳನ್ನು ಒಳಗೊಂಡಿದ್ದ ಬಂಗ್ಲೆಗೆ ಇದೀಗ ವಿದ್ಯುತ್ ಸಂಪರ್ಕದೊಂದಿಗೆ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. - ಚಂದ್ರಮೋಹನ್