ಸುಂಟಿಕೊಪ್ಪ, ಜೂ.30: ರಂಗಸಮುದ್ರ ಬಳಿಯ ಕುಟ್ಟನಹಳ್ಳ ಎಂಬಲ್ಲಿ ಹಾಡಹಗಲಿನಲ್ಲಿ ಹುಲಿಧಾಳಿಗೆ ರಾಸುವೊಂದು ಬಲಿಯಾಗಿದೆ. ಚಿಕ್ಲಿಹೊಳೆಯಿಂದ ರಂಗಸಮುದ್ರ ವಾಪ್ತಿಯ ಕುಟ್ಟನಹಳ್ಳ ನಿವಾಸಿ ತಳೂರು ನಾಗರಾಜು ಎಂಬವರ 9 ವರ್ಷದ ನಾಡು ಹಸುವನ್ನು ಹಾಲು ಕರೆದು 8.30 ಗಂಟೆಗೆ ತಮ್ಮ ಗದ್ದೆ ಬಳಿಯಲ್ಲಿ ಮೇಯಲು ಬಿಟ್ಟಿದ್ದರು. ಇದೇ ಸಮಯದಲ್ಲಿ ಆಹಾರ ಅರಸಿ ಬಂದಿದ್ದ ಹುಲಿಧಾಳಿ ನಡೆಸಿದ್ದು ಹಸುವಿನ ಕುತ್ತಿಗೆಯ ಭಾಗದಲ್ಲಿ ಘಾಸಿಗೊಳಿಸಿ ರಕ್ತವನ್ನು ಹೀರಿ ಕಳೆಬರವನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದೆ. ಮಾಲೀಕ ನೋಡಲಾಗಿ ಹಸು ಸತ್ತು ಬಿದ್ದಿರುವದು ಕಂಡು ಗಾಬರಿಗೊಂಡು ಹುಡುಕಾಡಿದಾಗ ಭಾರೀ ಗಾತ್ರದ ಹೆಜ್ಜೆಗಳ ಗುರುತು ಕಂಡು ಬಂದ ಹಿನೆÀ್ನಲೆ ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ರಂಜನ್ ಹಾಗೂ ಸಿಬ್ಬಂದಿಗಳು ಆಗಮಿಸಿ ಸಿಸಿಕ್ಯಾಮರ ಅಳವಡಿಸಿ ಹುಲಿಯ ಚಲನ ವಲನಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರಿಗೆ ಹುಲಿ ಧಾಳಿಯ ಭೀತಿ ಕಾಡಲಾರಂಭಿಸಿದೆ. ಒಂಟಿಯಾಗಿ ಹೊಲ, ಜಮೀನುಗಳಲ್ಲಿ ಕಾರ್ಯನಿರ್ವಹಿಸಲು ಕಷ್ಟಸಾಧ್ಯ; ಒಂದು ರೀತಿಯ ಭೀತಿಯ ವಾತಾವರಣ ಸೃಷ್ಟಿಸಿದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಹುಲಿಯನ್ನು ಬಂಧಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.