ಸೋಮವಾರಪೇಟೆ, ಜೂ. 30: ಮಡಿಕೇರಿ ವಿಧಾನ ಸಭಾ ಕ್ಷೇತ್ರದಿಂದ ಪುನರಾಯ್ಕೆಯಾದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರನ್ನು ಬಸವಾಪಟ್ಟಣದ ತೋಂಟದಾರ್ಯ ಮಠದ ಪೀಠಾಧ್ಯಕ್ಷ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಹಾಗೂ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಅವರುಗಳು ಅಭಿನಂದಿಸಿದರು.
ಶಾಸಕರ ಕಛೇರಿಯಲ್ಲಿ ಅಪ್ಪಚ್ಚುರಂಜನ್ ಅವರನ್ನು ಭೇಟಿ ಮಾಡಿದ ಶ್ರೀಗಳು, ಕೆಲಹೊತ್ತು ಚರ್ಚಿಸಿ ಅಭಿನಂದನೆ ಸಲ್ಲಿಸಿದರಲ್ಲದೇ, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿ ಆಶೀರ್ವದಿಸಿದರು. ಈ ಸಂದರ್ಭ ಸೋಮವಾರಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹದೇವಪ್ಪ, ನಿವೃತ್ತ ಪ್ರಾಂಶುಪಾಲ ರಾದ ಶಿವಪ್ಪ, ಪ್ರಮುಖರಾದ ಸಾಂಭಶಿವಮೂರ್ತಿ, ಮಹದೇವಪ್ಪ, ಅರ್ಚಕ ಬಸವಕುಮಾರಶಾಸ್ತ್ರೀ ಸೇರಿದಂತೆ ಇತರರು ಉಪಸ್ಥಿತರಿದ್ದರು.