ಸುಂಟಿಕೊಪ್ಪ, ಜೂ.30: ಚಾಲಕನ ನಿಯಂತ್ರಣ ತಪ್ಪಿದ ಕೋಳಿ ತುಂಬಿದ ಪಿಕಪ್ ಜೀಪು ರಸ್ತೆಯಲ್ಲಿ ತಲೆ ಕೆಳಗಾಗಿ ಮಗುಚಿಕೊಂಡಿರುವ ಘಟನೆ ಶನಿವಾರ ಮುಂಜಾನೆ ವೇಳೆ ನಡೆದಿದೆ.

ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ಕೋಳಿ ತುಂಬಿಕೊಂಡು ತೆರಳುತ್ತಿದ್ದ ಪಿಕಪ್ ಜೀಪು ಶಾಂತಗಿರಿ ತೋಟದ ತಿರುವಿನ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಮಗುಚಿಕೊಂಡಿದೆ. ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ವಾಹನದಲ್ಲಿ ಸಾಗಾಟಗೊಳಿಸುತ್ತಿದ್ದ ನೂರಾರು ಕೋಳಿಗಳು ಜೀವ ಕಳೆದುಕೊಂಡಿವೆ.